ದಾವಣಗೆರೆ, ಏ. 13 – ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಜೋಯಾಲುಕ್ಕಾಸ್ ವತಿಯಿಂದ ಕ್ಯಾಶ್‌ಬ್ಯಾಕ್ ಸಂಭ್ರಮಾಚರಣೆ ಕೊಡುಗೆ ನೀಡಲಾಗುತ್ತಿದೆ.
ಗ್ರಾಹಕರ ಪ್ರತಿಯೊಂದು ಖರೀದಿಗೆ ಕ್ಯಾಶ್‌ಬ್ಯಾಕ್ ಕೊಡುಗೆ ಇದೆ. ಬಂಗಾರ, ವಜ್ರ, ಬೆಳ್ಳಿ ಹಾಗೂ ಇತರೆ ಖರೀದಿಗೆ ಕ್ಯಾಶ್‌ಬ್ಯಾಕ್ ನೀಡಲಾಗುವುದು. ಗ್ರಾಹಕರು ಜನಸಂದಣಿ ತಪ್ಪಿಸಲು ಮುಂಗಡವಾಗಿ ಬುಕ್ಕಿಂಗ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.
ಪ್ರತಿ ಹತ್ತು ಸಾವಿರ ರೂ. ಹಾಗೂ ಅಧಿಕ ಮೊತ್ತದ ಬೆಳ್ಳಿ ಆಭರಣ ಖರೀದಿ ಮೇಲೆ 500 ರೂ. ಗಿಫ್ಟ್ ವೋಚರ್ ನೀಡಲಾಗುವುದು. 50 ಸಾವಿರ ರೂ.ಗಳಿಗೂ ಅಧಿಕ ಮೊತ್ತದ ಚಿನ್ನಾಭರಣ ಖರೀದಿಗೆ 1,000 ರೂ. ಗಿಫ್ಟ್ ವೋಚರ್ ನೀಡಲಾಗುವುದು. 50 ಸಾವಿರ ರೂ.ಗಳಿಗೂ ಅಧಿಕ ಮೊತ್ತದ ವಜ್ರ, ಅನ್‌ಕಟ್ ವಜ್ರ, ಅನರ್ಘ್ಯ ರತ್ನಾಭರಣ ಖರೀದಿ ಮೇಲೆ 2,000 ರೂ.ಗಳ ಗಿಫ್ಟ್ ವೋಚರ್ ನೀಡಲಾಗುವುದು. ಇದರ ಜೊತೆಗೆ ಎಸ್.ಬಿ.ಐ. ಕ್ರೆಡಿಟ್ ಕಾರ್ಡ್‌ಗಳಿಗೆ ಶೇ.5ರ ಹೆಚ್ಚುವರಿ ವಿನಾಯಿತಿ ಸಹ ದೊರೆಯಲಿದೆ. ಈ ಕೊಡುಗೆ ಏಪ್ರಿಲ್ 14ರಿಂದ 23ರವರೆಗೆ ಲಭ್ಯವಿರಲಿದೆ.
ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ನಾವು ವೈವಿಧ್ಯಮಯ ಹಾಗೂ ಅತ್ಯುತ್ತಮ ಆಯ್ಕೆಗಳನ್ನು ನೀಡುತ್ತಿದ್ದೇವೆ. ಇದರ ಜೊತೆ ಧನ್ಯವಾದದ ಸಂಕೇತವಾಗಿ ಕ್ಯಾಶ್‌ಬ್ಯಾಕ್ ಸಹ ನೀಡುತ್ತಿದ್ದೇವೆ ಎಂದು ಜೊಯಾಲುಕ್ಕಾಸ್ ಸಮೂಹದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜೋಯಾಲುಕ್ಕಾಸ್ ತಿಳಿಸಿದ್ದಾರೆ.