ತಳ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ: ಬಿಜೆಪಿ ಆಕಾಂಕ್ಷಿ ಮಹೇಶ್ ಅಸಮಾಧಾನ

ಹೊನ್ನಾಳಿ, ಏ.13- ಭಾರತೀಯ ಜನತಾ ಪಕ್ಷದಿಂದ ಜಿಲ್ಲೆಯೊಳಗೆ ಎಲ್ಲೂ ತಳ ಸಮುದಾಯದವರಿಗೆ ಟಿಕೆಟ್ ನೀಡದೇ ಬರೀ ಮೇಲ್ವರ್ಗದವರಿಗೆ ಮಾತ್ರ ಟಿಕೆಟ್ ನೀಡಲಾಗಿದೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂ.ಆರ್. ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯಿಂದ ಹೊನ್ನಾಳಿ ವಿಧಾನಸಭಾ ಕ್ಷೇತ್ರಕ್ಕೆ ಅರ್ಜಿ ಹಾಕಿದ್ದೆ. ಕೊನೆ ಗಳಿಗೆಯಲ್ಲಿ ನನ್ನ ಹೆಸರನ್ನು ಕೈಬಿಟ್ಟಿದ್ದಾರೆ. ಹೊನ್ನಾಳಿ ಕ್ಷೇತ್ರದಿಂದ 4ನೇ ಬಾರಿ ಟಿಕೆಟ್ ಕೊಡುವುದನ್ನು ತಪ್ಪಿಸಿದ್ದಾರೆ ಎಂದರು. ಜಿಲ್ಲೆಯಲ್ಲಿ ಕುರುಬ ಸಮಾಜ, ಕುಂಬಾರ ಸಮಾಜ, ಉಪ್ಪಾರ, ಬಣಜಾರ ಸೇರಿದಂತೆ ಕೆಳ ಸಮುದಾಯಕ್ಕೆ ಅನ್ಯಾಯವಾಗಿದೆ. ಮೂಡಿಗೆರೆ, ಹಾವೇರಿ, ಶಿವಮೊಗ್ಗದ ಶಾಸಕರು ಗಳಿಗೆ ಟಿಕೆಟ್ ತಪ್ಪಿಸಿದ್ದಾರೆ. ಲೋಕಾಯುಕ್ತ ಕೇಸಿನಲ್ಲಿದ್ದರೂ ನಿಯಮ ಗಾಳಿಗೆ ತೂರಿ ರೇಣುಕಾಚಾರ್ಯರಿಗೆ ಟಿಕೆಟ್ ನೀಡಲಾಗಿದೆ ಎಂದು ಅವರು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೊನಾಯಕನಹಳ್ಳಿ ಮಂಜುನಾಥ, ದೀಕ್ಷಿತ್, ಮಂಜು ಇತರರು ಇದ್ದರು.

error: Content is protected !!