56.75 ಲಕ್ಷ ರೂ. ಮೌಲ್ಯದ ಮದ್ಯ ವಶ

ದಾವಣಗೆರೆ, ಏ.13-  ಅಕ್ರಮವಾಗಿ ಸಾಗಿಸುತ್ತಿದ್ದ 56.75 ಲಕ್ಷ ರೂ. ಮೌಲ್ಯದ  4823.640 ಲೀಟರ್ (550 ಪೆಟ್ಟಿಗೆ) ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.

ಬುಧವಾರ ಬೆಳಿಗ್ಗೆ ಮೆ. ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕುಂಬಳಗೋಡು ಗ್ರಾಮದ, ಬೆಂಗಳೂರು ಈ ಡಿಸ್ಟಿಲರಿಯಿಂದ ಅಶೋಕ್ ಲೇಲ್ಯಾಂಡ್ ಟ್ರಕ್ ವಾಹನದ ಮೂಲಕ ಸಾಗಾಣಿಕೆಯಾದ ಮದ್ಯದ ಪೆಟ್ಟಿಗೆಯಲ್ಲಿ ಅಬಕಾರಿ  ಭದ್ರತಾ ಚೀಟಿ ನಮೂದಾಗದೇ, ಈ ಪೆಟ್ಟಿಗೆಗಳು ಸ್ಕ್ಯಾನ್ ಆಗದ ಕಾರಣ ಅಬಕಾರಿ ಕಾಯ್ದೆ ಉಲ್ಲಂಘನೆಯಾಗಿರುತ್ತದೆ.

ಈ ಹಿನ್ನೆಲೆಯಲ್ಲಿ 550 ಪೆಟ್ಟಿಗೆಯಲ್ಲಿರುವ 4823. 640 ಲೀಟರ್ ಮದ್ಯ ಹಾಗೂ 21 ಲಕ್ಷ ರೂ. ಮೌಲ್ಯದ ಅಶೋಕ್ ಲೇ ಲ್ಯಾಂಡ್ ಟ್ರಕ್ ಅನ್ನು ವಶಪಡಿಸಿಕೊಂಡಿದ್ದಾರೆ.

error: Content is protected !!