ಇಂದು `ಬೆಳಕು ಹಂಚಿದ ಬಾಲಕ’ ನಾಟಕ ಪ್ರದರ್ಶನ, ಅಂಬೇಡ್ಕರ್ ಜಯಂತಿ

ದಾವಣಗೆರೆ ಕೆಟಿಜೆ ನಗರ 2 ನೇ ಮುಖ್ಯರಸ್ತೆ, 10 ನೇ ಕ್ರಾಸ್‌ನಲ್ಲಿರುವ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಯುವ ಸ್ನೇಹ ಬಳಗದ ವತಿ ಯಿಂದ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 8.30 ಕ್ಕೆ ಮಲ್ಲಿಕಾರ್ಜುನ ಸಮುದಾಯ ಭವನದಿಂದ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಆರಂಭಿಸಿ, ಶಿವಪ್ಪಯ್ಯ ವೃತ್ತದ ಮೂಲಕ ಅಂಬೇಡ್ಕರ್ ವೃತ್ತಕ್ಕೆ ತೆರಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನಮನಗಳನ್ನು ಸಲ್ಲಿಸಲಾಗುವುದು.

ಸಂಜೆ 5 ಕ್ಕೆ ಮಲ್ಲಿಕಾರ್ಜುನ ಸಮುದಾಯ ಭವನ ದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನಿವೃತ್ತ ಪ್ರಾಂಶುಪಾಲರಾದ ಸಿ.ಕೆ. ಮಹೇಶ್ವರಪ್ಪ ಅಧ್ಯಕ್ಷತೆ ವಹಿಸುವರು. ಪ್ರೊ.ಎ.ಬಿ. ರಾಮಚಂದ್ರಪ್ಪ ಅವರು `ಅಂಬೇಡ್ಕರ್ ಬಾಲ್ಯ, ಬದುಕು, ಹೋರಾಟ’ ಕುರಿತು, ಶ್ರೀಮತಿ ಸುನಂದಾ ದುರ್ಗೇಶ್ `ಮಹಿಳಾ ಜಾಗೃತಿ, ಮಹಿಳಾ ಕಾನೂನು’ ಕುರಿತು ಉಪನ್ಯಾಸ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ರಂಗಾಯಣ ರಂಗ ನಿರ್ದೇಶಕ ದೇವರಾಜ್ ಮಳೇಹಳ್ಳಿ, ನ್ಯಾಯವಾದಿ ಹೆಚ್.ಎನ್. ಸುಧಾ ಮತ್ತಿತರರು ಭಾಗವಹಿಸಲಿದ್ದಾರೆ.

ರಂಗ ಅನಿಕೇತನ ಮಕ್ಕಳಿಂದ `ಬೆಳಕು ಹಂಚಿದ ಬಾಲಕ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.  ಇದೇ ಸಂದರ್ಭದಲ್ಲಿ 2021-22 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ  ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಪುರಸ್ಕರಿಸಲಾಗುವುದು ಎಂದು ವಕೀಲ ದುರುಗೇಶ್ ಗುಡಿಗೇರಿ ತಿಳಿಸಿದ್ದಾರೆ.

error: Content is protected !!