ದಾವಣಗೆರೆ, ಏ.13- ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4.10 ಲಕ್ಷ ರೂ. ಹಣವನ್ನು ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಹೆಚ್. ಬಸಾಪುರ ಚೆಕ್ ಪೋಸ್ಟ್ ಬಳಿ ವಶ ಪಡಿಸಿಕೊಳ್ಳಲಾಗಿದೆ.
ದಾವಣಗೆರೆಯಿಂದ ಹೊಳಲ್ಕೆರೆಗೆ ಬೈಕ್ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಪರಿಶೀಲಿಸಿದ ಅಧಿಕಾರಿಗಳು, ಹಣಕ್ಕೆ ಸೂಕ್ತ ದಾಖಲೆ ಇಲ್ಲದ ಕಾರಣಕ್ಕಾಗಿ ವಶಪಡಿಸಿಕೊಂಡಿದ್ದಾರೆ.