ಹರಪನಹಳ್ಳಿ : ಇಂದು ಚಿಣ್ಣರ ಬೇಸಿಗೆ ರಂಗ ಶಿಬಿರ

ಕತ್ತಲೆ ಬೆಳಕು ಟ್ರಸ್ಟ್‍ವತಿಯಿಂದ ಪಟ್ಟಣದ ಕಾಶಿ ಮಠದ ಆವರಣದಲ್ಲಿ  ಇಂದಿನಿಂದ ಇದೇ ದಿನಾಂಕ 30ರವರೆಗೆ ಚಿಲಿಪಿಲಿ ಸಮಾ ಗಮದ ಮೂಲಕ 7ರಿಂದ 14 ವರ್ಷದ ಮಕ್ಕಳಿಂದ ಚಿಣ್ಣರ ಬೇಸಿಗೆ ರಂಗ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‍ನ ನಿರ್ದೇಶಕರಾದ ಅರುಣ್ ರಂಗಾಯಣ, ಶ್ಯಾಮಲ ತಿಳಿಸಿದ್ದಾರೆ.

ಶಿಬಿರದಲ್ಲಿ ರಂಗ ಗೀತೆ, ರಂಗಾಟ, ಕೋಲಾಟ, ದೊಡ್ಡಾಟ, ಅಭಿನಯ, ಮೈಮ್, ಕಥೆ, ಕವಿತೆ ವಾಚನ, ಚಿತ್ರಕಲೆ, ಆರ್ಟ್-ಕ್ರಾಪ್ಟ್ ಮುಖವಾಡ ತಯಾರಿ ಹಾಗೂ ಶಿಬಿರದ ಕೊನೆಯಲ್ಲಿ ರಂಗಭೂಮಿಯ ಸೃಜನಶೀಲ ಚಟುವಟಿಕೆಗಳಿಂದ ಮಕ್ಕಳಿಂದ ನಾಟಕ ಪ್ರದರ್ಶನ ನಡೆಯಲಿದೆ. ಮಾಹಿತಿಗಾಗಿ 88809 66608, 99008 35621 ಸಂಪರ್ಕಿಸಬಹುದು.

error: Content is protected !!