ದಾವಣಗೆರೆ, ಏ. 12- ಅನ್ವೇಷಕರು ಆರ್ಟ್ ಫೌಂಡೇಶನ್ ವತಿಯಿಂದ ಇದೇ ದಿನಾಂಕ 3 ರಿಂದ ಆರಂಭಗೊಂಡಿರುವ ಮಕ್ಕಳ ಬೇಸಿಗೆ ಶಿಬಿರವು 23 ರವರೆಗೆ ನಡೆಯಲಿದೆ. ಈ ಶಿಬಿರದ ಪ್ರಯುಕ್ತ ಮಕ್ಕಳ ಸಂತೆ ಸ್ಪರ್ಧೆಯನ್ನು ಸಹ ಆಯೋಜಿಸಲಾಗಿದೆ ಎಂದು ಸಂಚಾಲಕ ಎಸ್.ಎಸ್. ಸಿದ್ಧರಾಜು ತಿಳಿಸಿದ್ದಾರೆ.
ಸ್ಪರ್ಧಾ ವಿಜೇತರಿಗೆ ಪ್ರಥಮ 5000, ದ್ವಿತೀಯ 3000, ತೃತೀಯ 2000 ಹಾಗೂ ಎರಡು ಸಮಾಧಾನಕರ 1000 ರೂ. ನಗದು ಬಹುಮಾನ ನೀಡಲಾಗುವುದು. ಮಕ್ಕಳಲ್ಲಿ ವಾಕ್ಚಾತುರ್ಯ, ಹಣಕಾಸು ವ್ಯವಹಾರಗಳ ಗ್ರಹಿಕೆ, ಕೌಶಲ್ಯ, ಸಾಮರ್ಥ್ಯ, ತಲ್ಲೀನತೆ, ಆತ್ಮವಿಶ್ವಾಸ ಹೆಚ್ಚಿಸಲಿದ್ದು, ಇದೇ ದಿನಾಂಕ 16 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ರ ವರೆಗೆ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಮಕ್ಕಳ ಸಂತೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ದಿನಾಂಕ 23 ರಂದು ಮಕ್ಕಳಿಂದ ಶಿಬಿರದಲ್ಲಿ ಕಲಿತ ಪ್ರಾತ್ಯಕ್ಷಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ನಾಟಕ ಪ್ರದರ್ಶನ ಸಹ ಇರುತ್ತದೆ. ವಿಜೇತರಿಗೆ ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9844268176 ಗೆ ಸಂಪರ್ಕಿಸಬಹುದು.