ನಗರದಲ್ಲಿ ಇಂದು `ನೃತ್ಯ ತರಂಗಿಣಿ’ ಬೇಸಿಗೆ ಶಿಬಿರದ ಸಮಾರೋಪ

ಜಿಲ್ಲಾ ಶಿಶು ಕಲ್ಯಾಣ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ `ನೃತ್ಯ ತರಂಗಿಣಿ’ ಬೇಸಿಗೆ ಶಿಬಿರದ (ಸಮೂಹ ನೃತ್ಯ) ಸಮಾರೋಪ ಸಮಾರಂಭ  ಇಂದು ಸಂಜೆ 5.30 ಕ್ಕೆ ವನಿತಾ ಸಮಾಜದ ಆವರಣದಲ್ಲಿನ ಸತ್ಯಸಾಯಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಮಾಜಿ ಸಚಿವರೂ, ಜಿಲ್ಲಾ ಶಿಶು ಕಲ್ಯಾಣ ಮಂಡಳಿ ಗೌರವಾಧ್ಯಕ್ಷರಾದ ನಾಗಮ್ಮ ಕೇಶವಮೂರ್ತಿ ಅಧ್ಯಕ್ಷತೆ ವಹಿಸುವರು. ನೂಪುರ ಕಲಾ ಸಂಸ್ಥೆ ಸಂಸ್ಥಾಪಕ ನಿರ್ದೇಶಕಿ ಬಿ.ಎಸ್. ಬೃಂದಾ, ನೃತ್ಯ ನಿರ್ದೇಶಕ ಈ.ಎನ್. ರಾಹುಲ್ ಅತಿಥಿಗಳಾಗಿ ಆಗಮಿಸಲಿದ್ದಾರೆ.  

error: Content is protected !!