ದಾವಣಗೆರೆ, ಏ.7- ನಗರದ ಜಯದೇವ ವೃತ್ತದ ನಿಟುವಳ್ಳಿ ರಸ್ತೆಯ ಬಳಿ ಗುರುವಾರ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಶಿವದಾನ (ಮಜ್ಜಿಗೆ) ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಬಿಸಿಲಿನ ದಗೆಗೆ ಬಳಲಿದ ವ್ಯಾಪಾರಿಗಳು, ಪಾದಚಾರಿಗಳು, ವಿದ್ಯಾರ್ಥಿಗಳು ಉಚಿತವಾಗಿ ವಿತರಿಸುತ್ತಿದ್ದ ಮಜ್ಜಿಗೆ ಕುಡಿದು ದಾಹ ನಿವಾರಿಸಿಕೊಂಡರು.
ಕಾರ್ಯಕ್ರಮದಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್, ಟ್ರಸ್ಟ್ ಗೌರವಾಧ್ಯಕ್ಷ ಡಾ.ಬಿ.ಎಂ ವಿಶ್ವನಾಥ್, ಅಧ್ಯಕ್ಷ ಡಾ.ಹೆಚ್.ಎನ್ ಮಲ್ಲಿಕಾರ್ಜುನ್, ತ್ರಿಶೂಲ್ ಪಾಣಿ ಪಟೇಲ್, ಪ್ರೊ. ಎಂ. ಬಸವರಾಜ್, ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಜಸ್ಟಿನ್ ಡಿ ಸೌಜ, ವೈದ್ಯ ಡಾ.ಎ.ಎನ್ ಸುಂದರೇಶ್, ಜವಳಿ ವರ್ತಕ ರಮೇಶ್ ಅಂಬರ್ಕರ್, ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ, ಮಂಜುಳ ಬಸವಲಿಂಗಪ್ಪ, ಎಂ.ಬಿ. ಮಧುಸೂದನ್ ಮತ್ತಿತರರಿದ್ದರು.