ಜಗಳೂರಿನಲ್ಲಿ ಭದ್ರತಾ ಪಡೆ ಪಥ ಸಂಚಲನ

ಜಗಳೂರಿನಲ್ಲಿ ಭದ್ರತಾ ಪಡೆ ಪಥ ಸಂಚಲನ

ಜಗಳೂರು, ಏ.7- ಪಟ್ಟಣದ ಪ್ರಮುಖ ವಾರ್ಡ್‌ ಗಳಲ್ಲಿ ಶಾಂತಿಯುತ ಚುನಾವಣೆ ಕುರಿತು ಪೊಲೀಸ್ ಹಾಗೂ ಭದ್ರತಾ ಪಡೆಯ ಪರೇಡ್ ನಡೆಸಲಾಯಿತು.

ಮಾದರಿ ನೀತಿ ಸಂಹಿತೆಯನ್ವಯ ಮತದಾರರು ಹಣ, ಆಮಿಷಗಳಿಗೆ ಬಲಿಯಾಗದೆ. ಅಮೂಲ್ಯ ಮತವನ್ನು ಕಡ್ಡಾಯವಾಗಿ ಚಲಾಯಿಸಬೇಕು, ಶಾಂತಿ ಭಂಗವಾಗದಂತೆ ಅಭ್ಯರ್ಥಿಗಳು ಕಾಯ್ದುಕೊಳ್ಳಲು ಜಾಗೃತಿ ಮೂಡಿಸಲಾಯಿತು.

ನೆಹರೂ ರಸ್ತೆ, ವಿದ್ಯಾನಗರ, ಆಶ್ರಯ ಕ್ಯಾಂಪ್, ಮುಸ್ಲಿಂ ಕಾಲೋನಿ, ವಿವಿಧ ಬಡಾವಣೆಗಳ ಬೀದಿಗಳಲ್ಲಿ ಸಂಚರಿಸಿ ಮತದಾನದ ಜಾಗೃತಿ ಮೂಡಿಸಿದರು.

ಈಗಾಗಲೆ ಮತಗಟ್ಟೆಗಳಲ್ಲಿ ಜಾಗೃತಿ ಮೂಡಿಸಲಾಗಿದ್ದು, ವಿಧಾನ ಸಭಾ ಚುನಾವಣೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯಬಾರದು. ಮತಯಾಚನೆ ವೇಳೆ‌ ಹಣ, ಮದ್ಯ, ಇತರೆ ಆಭರಣ, ವಸ್ತ್ರಗಳ ಆಮಿಷಯೊಡ್ಡಿ ಮತದಾರರ ಗಮನ ಸೆಳೆಯುವುದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಹಾಗೂ ಸಿ.ಆರ್.ಪಿ.ಎಫ್ ಭದ್ರತಾ ಪಡೆಯಿಂದ ಜಾಗೃತಿ ಪರೇಡ್ ನಡೆಸಲಾಯಿತು.

ಪೊಲೀಸ್ ಉಪ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ, ವೃತ್ತ ನಿರೀಕ್ಷಕ ಶ್ರೀನಿವಾಸ್ ನೇತೃತ್ವದಲ್ಲಿ ಪೊಲೀಸ್,  ಭದ್ರತಾ ಪಡೆ ಸಿಬ್ಬಂದಿಗಳು ಭಾಗವಹಿಸಿದ್ದರು.

error: Content is protected !!