ಹರಿಹರ, ಏ. 7 – ಹರಿಹರ ನಗರ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಪೊಲೀಸ್ ವತಿಯಿಂದ ನಗರದಲ್ಲಿ ನಡೆಯುವ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಿಮಿತ್ಯವಾಗಿ ರೂಟ್ ಮಾರ್ಚನ್ನು ಹಮ್ಮಿಕೊಳ್ಳಲಾಗಿತ್ತು.
ಗಾಂಧಿ ಮೈದಾನದಿಂದ ಪ್ರಾರಂಭವಾಗಿ, ನಗರಸಭೆ ಮುಂಭಾಗದ ರಸ್ತೆ, ಜೆಡಿಎಸ್ ಕಚೇರಿ ರಸ್ತೆ, ಹೈಸ್ಕೂಲ್ ಬಡಾವಣೆ, ಗಿರಿಯಮ್ಮ ಕಾಲೇಜು ಮುಂಭಾಗದ ರಸ್ತೆ, ಹಳ್ಳದಕೇರಿ, ಇಮಾಮ್ ಮೌಲಾ ರಸ್ತೆ, ದೇವಸ್ಥಾನ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಮುಖ್ಯರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಃ ಗಾಂಧಿ ಮೈದಾನಕ್ಕೆ ಬಂದು ಮುಕ್ತಾಯವಾಯಿತು.
650 ಸೆಂಟ್ರಲ್ ರಿಜರ್ವ್ ಪೊಲೀಸ್, 100 ಡಿ.ಆರ್., 50 ಸಿವಿಲ್ ಒಟ್ಟು 800 ಪೊಲೀಸ್ ಸಿಬ್ಬಂದಿಗಳು ರೂಟ್ ಮಾರ್ಚ್‌ನಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಆಡಿಷನಲ್ ಎಸ್ಪಿ ರಾಮಗೊಂಡ ಬಸರಗಿ, ಸಿಪಿಐ ಗೌಡಪ್ಪಗೌಡ, ಪಿಐಎಸ್ ದೇವಾನಂದ್, ಪಿಎಸ್ಐ ವೀಣಾ, ಗುತ್ತೂರು ಪಿಎಸ್ಐ ರಾಜು, ಎಎಸ್ಐ ವಿಜಯಕುಮಾರ್, ರಾಜಶೇಖರಯ್ಯ ಶಿವಪ್ಪ, ಪೊಲೀಸ್ ಸಿಬ್ಬಂದಿಗಳಾದ ರವಿಕುಮಾರ್, ಮಂಜುನಾಥ್, ಸಿದ್ದೇಶ್, ಉಮಾ, ಕವಿತಾ ಮತ್ತಿತರರು ಹಾಜರಿದ್ದರು.