ಗುಡ್‌ ಫ್ರೈಡೇ : ಹರಿಹರದಲ್ಲಿ ಸಾಮೂಹಿಕ ಪ್ರಾರ್ಥನೆ

ಗುಡ್‌ ಫ್ರೈಡೇ : ಹರಿಹರದಲ್ಲಿ ಸಾಮೂಹಿಕ ಪ್ರಾರ್ಥನೆ

ಹರಿಹರ, ಏ.7- ತ್ಯಾಗ, ಬಲಿದಾನದ ಸ್ಮರಣೆಯ ಶುಭ ಶುಕ್ರವಾರದ ಆಚರಣೆಯು ನಗರದ ಆರೋಗ್ಯ ಮಾತೆ ಚರ್ಚ್‌ನಲ್ಲಿ ನಡೆಯಿತು.

ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಪ್ರಧಾನ ಗುರುಗಳಾದ ಪೂಜ್ಯ ಫಾದರ್ ಡಾ.ಅಂಥೋನಿ ಪೀಟರ್ ಶುಭ ಶುಕ್ರವಾರದ ಸಂದೇಶ ನೀಡುತ್ತಾ, ಪ್ರತಿಯೊ ಬ್ಬರೂ ಮಾನವೀಯತೆ ಅಳವಡಿಸಿಕೊಳ್ಳ ಬೇಕು. ಮಾನವೀಯತೆಯ ಸಾಕಾರಮೂರ್ತಿ ಯೇಸುಕ್ರಿಸ್ತರ ಶಾಂತಿ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಯೇಸು ಕ್ರಿಸ್ತ ಮಾನವ ಜನಾಂಗಕ್ಕೆ ಶಾಂತಿಯನ್ನು ಹಂಚಲು ಬಂದರು. ಆದರೆ, ಮಾನವ ಅವರ ಸಂದೇಶಕ್ಕೆ ಸ್ಪಂದಿಸದೇ ತನ್ನ ವಿಕೃತಿ ಮೆರೆದ. ಆದರೂ ಭಗವಾನ್ ಯೇಸು ಅವರನ್ನು ಪ್ರೀತಿಸಿದರು. ಕೊನೆಗೆ ಶಿಲುಬೆಯ ಮೇಲೆ ತನ್ನ ಪ್ರಾಣವನ್ನು ಅರ್ಪಿಸಿ ತ್ಯಾಗ, ಬಲಿದಾನದ ಪ್ರತೀಕವಾದರು. ಶುಭ ಶುಕ್ರವಾರದ ಆಚರಣೆಯ ಪ್ರಯುಕ್ತ ಹರಿಹರ ಆರೋಗ್ಯಮಾತೆ ಬಸಿಲಿಕಾ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಲುಬೆ ಹಾದಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ ಎಂದರು.

ಈ ವೇಳೆ ಶಿಲುಬೆ ಹಾದಿ ಪ್ರಾರ್ಥನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿ ಯೇಸುವಿನ ಶಿಲುಬೆ ಮರಣದ ಸ್ಮರಣೆ ಮಾಡಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಾ.ಫ್ರಾನ್ಸಿಸ್ ಸರಪೋವಾ  ಇತರರು ಹಾಜರಿದ್ದರು.

error: Content is protected !!