ದಾವಣಗೆರೆ, ಏ. 3- ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರಗಳು ಅವಶ್ಯಕ ಎಂದು ಶ್ರೀ ಜಗದ್ಗುರು ಜಯವಿಭವ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಮನೋಹರ ಎಸ್. ಚಿಗಟೇರಿ ತಿಳಿಸಿದರು
ಇಲ್ಲಿನ ವಿನೋಬನಗರದ 1ನೇ ಮುಖ್ಯರಸ್ತೆ ಯಲ್ಲಿರುವ ಶ್ರೀ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಪ್ರೌಢಶಾಲೆಯಲ್ಲಿ ಮಕ್ಕಳಿಗಾಗಿ ಏರ್ಪಡಿಸಲಾಗಿರುವ ಬೇಸಿಗೆ ಚಿತ್ರಕಲಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವರ್ಷಪೂರ್ತಿ ಬರೀ ಓದು ಓದು ಎಂದು ವೇಳೆಯನ್ನು ಕಳೆದಿರುತ್ತಾರೆ. ಮಕ್ಕಳ ಪರೀಕ್ಷೆ ಮುಗಿ ದಿದೆ ಎಂದು ವ್ಯರ್ಥವಾಗಿ ರಜೆಯನ್ನು ಕಳೆಯದೇ ಇಂತಹ ಬೇಸಿಗೆ ಶಿಬಿರದಂತಹ ಪಠ್ಯೇತರ ಚಟು ವಟಿಕೆಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ಬುದ್ಧಿ ಶಕ್ತಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಶಾಲೆಯ ಮುಖ್ಯೋಪಾಧ್ಯಾಯ ಎಸ್.ನಾಗರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಈ ಶಾಲೆಯಲ್ಲಿ ಕಳೆದ 6 ವರ್ಷಗಳಿಂದ ಇಂತಹ ಬೇಸಿಗೆ ಚಿತ್ರಕಲಾ ಶಿಬಿರ ವನ್ನು ಆಯೋಜಿಸುತ್ತಾ ಬಂದಿದ್ದೇವೆ. ಈ ಶಿಬಿರದಲ್ಲಿ ಮಕ್ಕಳು ಚಿತ್ರಕಲೆಯ ವಿವಿಧ ಪ್ರಕಾರಗಳನ್ನು ಆಟ ಆಡುತ್ತಾ ಕಲಿತು ಸಂತೋಷದಿಂದ ಹೊಸ ಕೌಶಲ್ಯವನ್ನು ನಿಮ್ಮದಾಗಿಸಿಕೊಳ್ಳಿರಿ. ಇದರಿಂದ ನೀವು ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಕೀರ್ತಿ ತರುವಂತಾಗಿರಿ ಎಂದು ಶುಭ ಹಾರೈಸಿದರು.
ಶಿಬಿರದ ಸಂಚಾಲಕ ಶಾಂತಯ್ಯ ಪರಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬೇಸಿಗೆ ಶಿಬಿರದಲ್ಲಿ ಪ್ರತಿದಿನ ಚಿತ್ರಕಲೆಗೆ ಸಂಬಂಧಿಸಿದ ಒಂದೊಂದು ರೀತಿಯ ವಿವಿಧ ಮಾಧ್ಯಮದ ಪ್ರಕಾರಗಳಾದ ಪೆನ್ಸಿಲ್ ಡ್ರಾಯಿಂಗ್, ಕಲರಿಂಗ್, ರೇಖಾ ಚಿತ್ರ, ಶೇಡಿಂಗ್ಸ್, ಗ್ರೀಟಿಂಗ್ಸ್, ಥ್ರೆಡ್ ಆರ್ಟ್, ಪ್ರಿಂಟಿಂಗ್, ಪೇಪರ್ ಕ್ರಾಫ್ಟ್, ಗ್ಲಾಸ್ ಪೇಂಟಿಂಗ್ ಸೇರಿದಂತೆ ವಿವಿಧ ರೀತಿಯ ಕಲಾ ಪ್ರಕಾರಗಳ ಬಗ್ಗೆ ನಿಮಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾ ಯರಾದ ಎಸ್.ಎಂ.ಶೈಲಜ, ಶಿಕ್ಷಕರಾದ ಎಚ್.ಬಿ. ಜ್ಯೋತಿ, ಜಿ.ಎಂ.ಪ್ರಭು, ಕೆ.ಪಿ.ರುದ್ರೇಶ ಮೂರ್ತಿ, ಲಿಂಗರಾಜ ಗಾಜಿ, ಎಸ್.ಶ್ವೇತಾ ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.