ಕಲಬುರ್ಗಿ, ಮಾ. 27- ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ ಈಚೆಗೆ ಜಿಲ್ಲೆಯ ಲಾಲ್ ಧರಿಯಲ್ಲಿ ವಿಭಾಗ ಮಟ್ಟದ ಬಂಜಾರ ಕಲಾ ಮೇಳದಲ್ಲಿ ವಿವಿಧ ಸ್ಪರ್ಧೆಗಳು ನಡೆದವು. ಜಾನಪದ ಕಲಾವಿದ ಉಮೇಶ್ ನಾಯ್ಕ ಚಿನ್ನ ಸಮುದ್ರ ಇವರು ಮುಖ್ಯ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಇವರೊಂದಿಗೆ ರಾಜ್ಯದ ಬೇರೆ ಬೇರೆ ಭಾಗದಿಂದ ಬಂದಂತಹ ಇನ್ನಿತರೆ ತೀರ್ಪುಗಾರರಾದ ಧನುರಾಮ್ ಲಮಾಣಿ ಗದಗ, ಸತೀಶಾ ಗಟ್ಟಿ ಮಂಡೇಲಾ ಯಲೋದಹಳ್ಳಿ, ಮೀರಾಬಾಯಿ ಹೂವಿನಹಡಗಲಿ, ರಾಜು ಬಂಡ್ರಿ ಹರಪನಹಳ್ಳಿ, ಮೀಠ್ಯಾನಾಯ್ಕ ಬೆಂಗಳೂರು, ಮಾಲತೇಶ ಲಮಾಣಿ ಧಾರವಾಡ, ಸುರೇಶ್ ರಾಠೋಡ್ ಗದಗ ಅವರುಗಳು ಕಲಾ ಮಳಾವ್ ಸ್ಪರ್ಧೆಯನ್ನು ಯಶಸ್ವಿಗೊಳಿಸಿದರು.
ಮುಖ್ಯ ಅತಿಥಿಗಳಾಗಿ ತಾಂಡಾ ಅಭಿವೃದ್ಧಿ ನಿಗಮದ ಸಂಶೋಧಕ ರಮೇಶ್, ಕಲಬುರ್ಗಿ ಅಭಿವೃದ್ಧಿ ಅಧಿಕಾರಿ ಸೂರ್ಯಕಾಂತ್ ರಾಠೋಡ್, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮನೋಹರ ಪವಾರ್, ಕಟ್ಟೋಳಿ ದೇವಸ್ಥಾನದ ಮುಖ್ಯಸ್ಥ ಆರ್.ಡಿ ಪವಾರ್ ಭಾಗವಹಿಸಿದ್ದರು.