ಅಭಿವೃದ್ಧಿ ಮಾಡಿದ್ದರೆ ಟಿಕೆಟ್ ಬೇಡುವ ಪರಿಸ್ಥಿತಿ ಬರುತ್ತಿರಲಿಲ್ಲ

ಅಭಿವೃದ್ಧಿ ಮಾಡಿದ್ದರೆ ಟಿಕೆಟ್ ಬೇಡುವ ಪರಿಸ್ಥಿತಿ ಬರುತ್ತಿರಲಿಲ್ಲ

ಅಭಿವೃದ್ಧಿ ಮಾಡಿದ್ದರೆ ಟಿಕೆಟ್ ಬೇಡುವ ಪರಿಸ್ಥಿತಿ ಬರುತ್ತಿರಲಿಲ್ಲ - Janathavaniಶಾಸಕ ರಾಮಪ್ಪಗೆ ಮಾಜಿ ಶಾಸಕ ಶಿವಶಂಕರ್ ಚಾಟಿ

ಹರಿಹರ, ಮಾ. 27- ಎರಡು ರಾಷ್ಟ್ರೀಯ ಪಕ್ಷದವರು ಜನರನ್ನು ಸೇರಿಸಲು ಹಣವನ್ನು ಖರ್ಚು ಮಾಡಬೇಕಿದೆ. ಆದರೆ, ಜೆಡಿಎಸ್ ಕಾರ್ಯಕರ್ತರು ಹಣದ ಆಮಿಷವಿಲ್ಲದೇ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದಾರೆ ಎಂದು ಮಾಜಿ ಶಾಸಕ ಹೆಚ್. ಎಸ್ ಶಿವಶಂಕರ್ ಹೇಳಿದರು.

ಜೆಡಿಎಸ್ ವತಿಯಿಂದ ಮುಂಬರುವ ಚುನಾವಣೆ ನಿಮಿತ್ತ ಹಮ್ಮಿಕೊಂಡ ಬೃಹತ್ ಬೈಕ್ ರಾಲಿಗೆ ನಗರದ ಹರಿಹರೇಶ್ವರ ದೇವಸ್ಥಾನದಲ್ಲಿ ದೇವರಿಗೆ ಮತ್ತು ನಾಡ್ ಬಂದ್ ಷಾವಲಿ ದರ್ಗಾದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ಹೆಚ್.ಶಿವಪ್ಪ ವೃತ್ತದಲ್ಲಿ ಬೃಹತ್ ಪ್ರಮಾಣದಲ್ಲಿ ಸೇರಿದ್ದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ತಾಲ್ಲೂಕಿನ ಯಾವುದೇ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸಗಳು ಹಣ ಕೊಡದೆ ಆಗುತ್ತಿಲ್ಲ. ಶಾಸಕ ರಾಮಪ್ಪ ಅವರು ಅಭಿವೃದ್ಧಿ ಕಾರ್ಯಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ, ಅಭಿವೃದ್ಧಿ ಆಗಿದ್ದರೆ ಪಟ್ಟಿ ಬಿಡುಗಡೆ ಮಾಡಿರುತ್ತಿದ್ದರು ಎಂದರು. ಶಾಸಕರು ತಮ್ಮ ಅವಧಿಯಲ್ಲಿ ಎಷ್ಟರ ಮಟ್ಟಿಗೆ ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ಮತದಾರರು ಅರಿತಿದ್ದಾರೆ. ಮತದಾರರಿಗೆ ತೃಪ್ತಿ ತರುವಂತೆ ಕೆಲಸ ಮಾಡಿದ್ದರೆ ರಾಜ್ಯ ನಾಯಕರ ಮುಂದೆ ಟಿಕೆಟ್‌ಗಾಗಿ ಬೇಡಿಕೊಳ್ಳುವ ಹಾಗೂ ಪಕ್ಷದ ಕಾರ್ಯಕರ್ತನಿಗೆ ಕಪಾಳ ಮೋಕ್ಷದ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಶಿವಶಂಕರ್ ಹೇಳಿದರು.

ಸುಮಾರು ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಬೈಕ್ ರಾಲಿ ನಗರದ ಜೆಡಿಎಸ್ ಕಚೇರಿಯ ಮುಂಭಾಗದಿಂದ ಹೊರಟು ನಗರದ ವಿವಿಧ ವಾರ್ಡಿನಲ್ಲಿ ಸಂಚರಿಸಿ ತಾಲ್ಲೂಕಿನ ಗುತ್ತೂರು, ಗಂಗನಹರಸಿ, ದೀಟೂರು, ಸಾರಥಿ, ಪಾಮೇನಹಳ್ಳಿ, ಕುರುಬರಹಳ್ಳಿ, ಕರ್ಲಹಳ್ಳಿ, ಕೊಂಡಜ್ಜಿ ಬಸಾಪುರ, ದೊಗ್ಗಳ್ಳಿ, ಅಮರಾವತಿ, ಬೆಳ್ಳೂಡಿ, ಬನ್ನಿಕೋಡು ಬೇವಿನಹಳ್ಳಿ, ದೇವರಬೆಳಕೆರೆ, ಸಾಲಕಟ್ಟೆ, ಭಾನುವಳ್ಳಿ, ಮಿಟ್ಟಲಕಟ್ಟೆ, ನಿಟ್ಟೂರು, ಕುಂಬಳೂರು, ಮಲೇಬೆನ್ನೂರು, ಜಿಗಳಿ, ಕಡರನಾಯಕನಹಳ್ಲಿ, ಕೊಕ್ಕನೂರು, ಹೊಳೆ ಸಿರಿಗೆರೆ, ಕಮಲಾಪುರ, ಇಂಗಳಗುಂದಿ, ಹಿಂಡಸಘಟ್ಟ, ಹುಲಗಿನಹೊಳೆ, ದೂಳೆಹೊಳೆ, ಎಳಹೊಳೆ, ಗೋವಿನಾಳ, ಉಕ್ಕಡಗಾತ್ರಿ, ನಂದಿಗುಡಿ, ನಂದಿಗಾವಿ, ಬಿಳಸನೂರು, ರಾಮತೀರ್ಥ, ರಾಜನಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಬೃಹತ್ ಬೈಕ್ ರಾಲಿ ಮಾಡಲಾಯಿತು.

ಈ ಸಂದರ್ಭದಲ್ಲಿ ಜೆಡಿಸ್ ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ, ಗ್ರಾಮಾಂತರ ಘಟಕದ ಅಧ್ಯಕ್ಷ ಪರಮೇಶ್ವರಪ್ಪ ಹಳ್ಳಿಹಾಳ, ನಗರ ಘಟಕದ ಅಧ್ಯಕ್ಷ ಹಬೀಬ್ ಉಲ್ಲಾ, ನಗರಸಭೆ ಸದಸ್ಯರಾದ ಆರ್.ಸಿ. ಜಾವೇದ್, ಬಿ ಅಲ್ತಾಫ್, ಪಿ‌.ಎನ್. ವಿರುಪಾಕ್ಷಪ್ಪ, ಉಷಾ ಮಂಜುನಾಥ್, ಗುತ್ತೂರು ಜಂಬಣ್ಣ, ದಿನೇಶ್ ಬಾಬು, ಮಾಜಿ ನಗರಸಭೆ ಸದಸ್ಯರಾದ ಗಜಾನನ್ ಧಲಬಂಜನ್, ಸುರೇಶ್, ನಗೀನಾ ಸುಭಾನ್, ಹಾಜಿ ಹಾಲಿ, ರೆಹಮಾನ್ ಖಾನ್, ಮುಖಂಡರಾದ ಪರಮೇಶ್ವರಗೌಡ, ಮಿಟ್ಟಲಕಟ್ಟಿ ಚಂದ್ರಪ್ಪ, ದೀಟೂರು ಶೇಖರಪ್ಪ, ಅಮರಾವತಿ ನಾಗರಾಜ್, ಚಂದ್ರಪ್ಪ, ಸುರೇಶ್ ಚಂದಾಪೂರ್, ಜಾಕೀರ್, ಮಾರುತಿ, ಆಸೀಫ್ ಅಡಕಿ ಕುಮಾರ್, ತನ್ವೀರ್ ಆಹ್ಮದ್, ಅಸ್ರಾಖಾನ್, ಇಲಿಯಾಜ್ ಆಹ್ಮದ್, ಜಗದೀಶ್, ಲತಾ ಕೊಟ್ರೇಶ್, ವೀರೇಶ್, ನವೀನ್ , ಮಹೇಶ್ ಬನ್ನಿಕೋಡು, ಈಶ್ವರಪ್ಪ, ಹುಗ್ಗಿ ಅಡಿವೇಶ್, ದೀಟೂರು ವಾಮದೇವ, ದೀಟೂರು ಮಹೇಶ್ವರಪ್ಪ, ಲಕ್ಷ್ಮೀ ರಾಜಾಚಾರ್, ಶೀಲಾ ಕೊಟ್ರೇಶ್, ಶೀಲಾಕುಮಾರಿ, ಸುನಂದ, ಮಲ್ಲನಾಯಕನಹಳ್ಳಿ ಚಂದ್ರು, ಅಂಬರೀಶ್, ರಮೇಶ್ ಮಾನೆ, ಭೋಜರಾಜ್, ಪೂಜಾರ್ ಹೇಮಣ್ಣ, ಎ.ಹೆಚ್. ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!