ಹರಿಹರ, ಮಾ. 26 – ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ದಿ ವಿಭಾಗದ ಮೂಲಕ ಜ್ಞಾನ ದೀಪ ಕಾರ್ಯಕ್ರಮದಡಿ ಬಿಳಸನೂರು ಸರ್ಕಾರಿ ಪ್ರೌಢಶಾಲೆಗೆ 10 ಜೊತೆ ಬೆಂಚ್, ಡೆಸ್ಕ್‌ಗಳನ್ನು ಒದಗಿಸಲಾಯಿತು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿ ವೃದ್ದಿ ಯೋಜನೆಯ ಸಮುದಾಯ ಅಭಿವೃದ್ದಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಹಿರಿಯ ಶಿಕ್ಷಕಿ ಕುಸುಮ, ಜಿಲ್ಲೆಯ ಹಿರಿಯ ನಿರ್ದೇಶಕರಾದ ವಿ.ವಿಜಯಕುಮಾರ್ ನಾಗನಾಳ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಮುದಾಯ ಅಭಿವೃದ್ದಿ ವಿಭಾಗದ ಯೋಜನಾಧಿಕಾರಿ ಪುಷ್ಪರಾಜ್, ಹರಿಹರ ತಾಲ್ಲೂಕಿನ ಯೋಜ ನಾಧಿಕಾರಿ ಗಣಪತಿ ಮಾಳಂಜಿ, ಊರಿನ ಪ್ರಮುಖರಾದ ಹನುಮಂತ ರೆಡ್ಡಿ, ರಾಜಪ್ಪ, ವೀರೇಶ್, ಪ್ರಕಾಶ್, ಒಕ್ಕೂಟದ ಅಧ್ಯಕ್ಷೆ ರೇಣುಕಾ, ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ರೇಖಾ, ಒಕ್ಕೂಟದ ಪದಾಧಿಕಾರಿಗಳಾದ ಶಶಿರೇಖಾ, ಮೇಲ್ವಿಚಾರಕರಾದ ಸಂತೋಷ್ ಕೆ, ಪ್ರಸನ್ನ, ಸೇವಾ ಪ್ರತಿನಿಧಿ ರೇಣುಕಾ ಉಪಸ್ಥಿತರಿದ್ದರು.
ಹಿಂದಿ ಶಿಕ್ಷಕ ಶಂಕ್ರಪ್ಪ ಸ್ವಾಗತಿಸಿದರು. ದೈಹಿಕ ಶಿಕ್ಷಕ ಜಗದೀಶ್ ನಿರೂಪಿಸಿದರೆ, ಆಂಗ್ಲ ಮಾಧ್ಯಮ ಶಿಕ್ಷಕ ಗಂಗಾಧರ್ ವಂದಿಸಿದರು.