ರಾಣೇಬೆನ್ನೂರು : ಮಾಗೋಡಿನಲ್ಲಿ ದೊಡ್ಡ ಕೆರೆಯ ಹಸ್ತಾಂತರ

ರಾಣೇಬೆನ್ನೂರು : ಮಾಗೋಡಿನಲ್ಲಿ ದೊಡ್ಡ ಕೆರೆಯ ಹಸ್ತಾಂತರ

ರಾಣೇಬೆನ್ನೂರು, ಮಾ.23- ತಾಲ್ಲೂಕಿನ ಮಾಗೋಡ ಗ್ರಾಮದ ದೊಡ್ಡಕೆರೆಯ ಪುನಃಶ್ಚೇತನ ಕಾಮಗಾರಿಗೆ ಚಾಲನೆ ಹಾಗೂ ಕೆರೆಯ ಹಸ್ತಾಂತರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಲಿಂಗದಹಳ್ಳಿಯ ಶ್ರೀ ವೀರಭದ್ರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ನಿಸರ್ಗ ಸಂಪತ್ತು ಮನುಷ್ಯನಿಗೆ ದೈವದತ್ತವಾಗಿ, ಉಚಿತವಾಗಿ ಬಂದ ಬಹುದೊಡ್ಡ ಉಡುಗೊರೆ. ಅದನ್ನು, ಸಂರಕ್ಷಿಸಿ, ಉಳಿಸಿ, ಕಾಯ್ದುಕೊಳ್ಳುವುದು ನಮ್ಮ ಕರ್ತವ್ಯ ಎಂದು ನುಡಿದರು.

ಶಾಸಕ ಅರುಣಕುಮಾರ ಪೂಜಾರ ಅವರು ಕೆರೆ ಹಸ್ತಾಂತರ ಹಾಗೂ ನಾಮಫಲಕ ಅನಾವರಣ ಗೊಳಿಸಿ ಮಾತನಾಡಿ, ಜಾನುವಾರು, ಕೃಷಿ, ಅಂತ ರ್ಜಲ ಮಟ್ಟ ಹೆಚ್ಚಳ ಹಾಗೂ ಸಕಲ ಜೀವರಾಶಿ ಗಳಿಗೆ ಕೆರೆಯ ಅಭಿವೃದ್ಧಿ ಯಿಂದ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ ಮಾತನಾಡಿ, ಪ್ರಸ್ತುತ ವರ್ಷ ಹಾವೇರಿ ಜಿಲ್ಲೆಯಲ್ಲಿ 5 ಕೆರೆಗಳ ಕಾಮಗಾರಿಯನ್ನು ಧರ್ಮಸ್ಥಳ ಯೋಜನೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಅನುಷ್ಟಾನ ಮಾಡಲಾಗಿದೆ ಎಂದು ತಿಳಿಸಿದರು.

ಇಟಗಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿಲ್ಪಾ ಮೂಲಕ ಕೆರೆ ನಿರ್ವಹಣೆ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಮತ್ತು ಇತರರು ಉಪಸ್ಥಿತರಿದ್ದರು. ಸತೀಶ್‌ ಶೇಟ್‌ ನಿರೂಪಿಸಿದರು, ರಮೇಶ್‌ ವಂದಿಸಿದರು.

error: Content is protected !!