ಜೆಡಿಎಸ್ `ಪಂಚ ರತ್ನ’ ಯೋಜನೆಗಳು ರಾಜ್ಯಕ್ಕೆ ಅಗತ್ಯವಾಗಿವೆ

ಜೆಡಿಎಸ್ `ಪಂಚ ರತ್ನ’ ಯೋಜನೆಗಳು ರಾಜ್ಯಕ್ಕೆ ಅಗತ್ಯವಾಗಿವೆ

 ಜೆಡಿಎಸ್ ಮಹಿಳಾ ಸಂಘಟನಾ ಸಭೆಯಲ್ಲಿ ಜಿಲ್ಲಾ ವೀಕ್ಷಕರಾದ ಗೀತಾ ಶಾಂತಕುಮಾರ್

ದಾವಣಗೆರೆ, ಮಾ.20- ಮಾಜಿ ಶಾಸಕ ಎಚ್. ಎಸ್. ಶಿವಶಂಕರ್ ಅವರ ಗೃಹ ಕಚೇರಿಯಲ್ಲಿ  ಜೆಡಿಎಸ್‌ ಮಹಿಳಾ ಘಟಕದ ಚುನಾವಣಾ ಪೂರ್ವಭಾವಿ  ಸಭೆಯು ಮೊನ್ನೆ ನಡೆಯಿತು.  

ಸಭೆಗೆ ಜಿಲ್ಲಾ ವೀಕ್ಷಕರಾಗಿ ಆಗಮಿಸಿದ್ದ ಗೀತಾ ಶಾಂತಕುಮಾರ್  ಮಾತನಾಡಿ, ಜೆಡಿಎಸ್ ನ ಪಂಚ ರತ್ನ ಯೋಜನೆಗಳು ಕರ್ನಾಟಕ ರಾಜ್ಯಕ್ಕೆ ಅಗತ್ಯವಾಗಿ ಬೇಕಿದ್ದು, ಈ ಯೋಜನೆ ಗಳಿಂದ ರಾಜ್ಯದ ಅಭಿವೃದ್ಧಿ ಮುಂಚೂಣಿಗೆ ಬರಲಿದೆ ಎಂದು ಹೇಳಿದರು.

ದೇವೇಗೌಡರು ಪ್ರಧಾನ ಮಂತ್ರಿಗ ಳಾಗಿದ್ದಾಗ ಮಹಿಳೆಯರಿಗೆ ವಿಶೇಷ ಮೀಸ ಲಾತಿ  ನೀಡುವುದರ ಮೂಲಕ ಮಹಿಳೆ ಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಲು ಪ್ರಯತ್ನಿಸಿದರು.

ಬರುವ ಚುನಾವಣೆಯಲ್ಲಿ ಎಚ್. ಡಿ. ಕುಮಾರಸ್ವಾಮಿ ಅವರು ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿ,   ಸ್ಪರ್ಧಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ.      ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಅತಿಯಾಗಿದ್ದು, ಈ ಸರ್ಕಾರದಿಂದ ಜನತೆ ಭ್ರಮನಿರಸನಗೊಂಡಿದ್ದಾರೆ. ಹಾಗಾಗಿ   ಈ ಬಾರಿ   ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಸಂಪೂರ್ಣವಾದ ಪಾರದರ್ಶಕ ಆಡಳಿತ ನೀಡಲಿದೆ ಎಂದು ಹೇಳಿದರು.  

ಉತ್ತರ ಕ್ಷೇತ್ರದ ಅಧ್ಯಕ್ಷ ಬಾತಿ ಶಂಕರ್  ಮಾತನಾಡಿ,  ಉತ್ತರ ಕ್ಷೇತ್ರಕ್ಕೆ ಮೂರು ನಾಲ್ಕು ಜನ ಆಕಾಂಕ್ಷಿಗಳಿದ್ದು, ಪಕ್ಷದ ವರಿಷ್ಠರು ಶೀಘ್ರವಾಗಿ ಅಭ್ಯರ್ಥಿ ಯನ್ನು ತೀರ್ಮಾನ ಮಾಡಲಿದ್ದಾರೆ  ಎಂದು ತಿಳಿಸಿದರು.

ಉತ್ತರ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷರಾದ ಸುಧಾ ವೃಷಭ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕ್ತಾರ   ಜಿ. ಅಮಾನುಲ್ಲಾ ಖಾನ್, ಪಕ್ಷದ ಕಾರ್ಯಕರ್ತರು ಪ್ರತಿ ಬೂತ್ ನಲ್ಲೂ ಮತದಾರರನ್ನು ಭೇಟಿ ಮಾಡುವ ಮೂಲಕ ಸಂಘಟನೆಗೆ ಹೆಚ್ಚು ಒತ್ತು ಕೊಡುವಂತೆ ಸೂಚಿಸಿದರು. 

ಜಿಲ್ಲಾ ಮಹಿಳಾ ಅಧ್ಯಕ್ಷರಾದ ಶೀಲಾ ಕುಮಾರ್, ಕಾರ್ಯಾಧ್ಯಕ್ಷರಾದ ರೇಖಾ ಸಿಂಗ್ ಪ್ರಧಾನ ಕಾರ್ಯದರ್ಶಿ  ಗಾಯತ್ರಿ ಹಾಲೇಶ್, ಉಪಾಧ್ಯಕ್ಷರಾದ ವಸಂತಮ್ಮ, ನಿರ್ಮಲ ಬಿ. ಪುಟ್ಟಮ್ಮ, ರೇಖಾ, ಅಂಬಿಕಾ, ಮಂಜುಳಾ, ಮೀನಮ್ಮ , ಲಕ್ಷ್ಮಿ, ಸುಶೀಲಮ್ಮ, ಗೀತಾ ಮತ್ತಿತರರು ಇದ್ದರು.

ಇದೇ ಸಂದರ್ಭದಲ್ಲಿ ದೇವರಹಟ್ಟಿ ಶೌಕತ್‌ ಅಲಿ, ದಾದಾಪೀರ್, ಪಾರ್ವತಿ ದೇವಿ ಇವರು ಪಕ್ಷಕ್ಕೆ ಸೇರ್ಪಡೆಗೊಂಡರು.

ಜೆಡಿಎಸ್‌ ಯುವ ಘಟಕದ ಅಧ್ಯಕ್ಷ  ಹುಲಿಮನಿ ಕಿರಣ, ಅಮೃತ್ ನಗರದ ವೀರೇಶ್ ಇನಾಯತ್ ದೇವರಹಟ್ಟಿ,   ಎಂ.ಆರ್. ಮುದೇನೂರು ಶ್ರೀಕಾಂತ್, ಪ್ರಕಾಶ್, ಶ್ರೀನಿವಾಸ್, ರಿಯಾಜ್ ಮುಂತಾದವರಿದ್ದರು. 

ಕಾರ್ಯಾಧ್ಯಕ್ಷ ಫಕೃದ್ದೀನ್  ದೊಡ್ಮನೆ ನಿರೂಪಿಸಿದರು. ಟಿ. ಚಂದ್ರಪ್ಪ ಪ್ರಾರ್ಥನೆ ಮಾಡಿದರು ಕಲ್ಪನ ಹಳ್ಳಿ ನಂಜುಂಡಿ ವಂದಿಸಿದರು.

error: Content is protected !!