ಸಾಲದ ಹೊರೆಯೇ ಬಿಜೆಪಿ ಸಾಧನೆ

ಸಾಲದ ಹೊರೆಯೇ ಬಿಜೆಪಿ ಸಾಧನೆ

ಹರಿಹರದ ಪ್ರಜಾಧ್ವನಿ ಸಮಾರಂಭದಲ್ಲಿ ಸಿದ್ದರಾಮಯ್ಯ ತರಾಟೆ

ಹರಿಹರ, ಮಾ. 13 – ರಾಜ್ಯ ಬಿಜೆಪಿ ಸರ್ಕಾರ ತನ್ನ ಆಡಳಿತದಲ್ಲಿ ಜನರಿಗಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಸಾಲ ಹೆಚ್ಚಿಸಿದೆ. ಜನರ ಮೇಲೆ ಸಾಲದ ಹೊರೆಯನ್ನು ಹಾಕಿದ್ದೇ ಬಿಜೆಪಿ ಸರ್ಕಾರದ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಗಾಂಧಿ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಮಾರಂಭವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ರಾಜ್ಯದಲ್ಲಿ 2018 ರ ಸುಮಾರಿಗೆ 2.42 ಲಕ್ಷ ಕೋಟಿ ರೂಪಾಯಿ ಇದ್ದ, ಸಾಲದ ಮೊತ್ತವನ್ನು ಇವರ ಆಡಳಿತದಲ್ಲಿ 5. 64 ಲಕ್ಷ ಕೋಟಿ ರೂ. ಮಾಡಿ ಹೆಚ್ಚುವರಿಯಾಗಿ 3.25 ಲಕ್ಷ ಕೋಟಿ ರೂ. ಸಾಲವನ್ನು ಮಾಡಿದ್ದಾರೆ. ಇದೇ ಬಿಜೆಪಿ ಸರ್ಕಾರದ ಸಾಧನೆ ಎಂದರು.

ಬಿಜೆಪಿ ಸರ್ಕಾರ ಮಾಡಬೇಕೆಂದು ಆಸೆ ಯಿಂದ ಆಪರೇಷನ್ ಕಮಲ ಮಾಡಿದ್ದಾರೆ. ಒಬ್ಬ ಶಾಸಕನ ಖರೀದಿಸಲು 30-40 ಕೋಟಿ ರೂ. ಮತ್ತೆ ಅವರನ್ನು ಗೆಲ್ಲಿಸಲು 40-50 ಕೋಟಿ ರೂ. ಖರ್ಚಾಗಿದೆ. ಹೀಗೆ ಸಾವಿರಾರು ಕೋಟಿ ಹಣವನ್ನು  ಖರ್ಚು ಮಾಡಲಿಕ್ಕೆ ಹಣ ಎಲ್ಲಿಂದ ಬರುತ್ತದೆ? ರಾಜ್ಯದ ಜನರ ಹಣ ವನ್ನು ಭ್ರಷ್ಟಾಚಾರ ರೂಪದಲ್ಲಿ ಲೂಟಿ ಮಾಡ ಲಾಗುತ್ತಿದೆ ಎಂದವರು ಆರೋಪಿಸಿದರು.

ನಮ್ಮ ಆಡಳಿತದಲ್ಲಿ ಇದ್ದ ಶಾದಿಭಾಗ್ಯ, ಪಶುಭಾಗ್ಯ, ಕೃಷಿ ಭಾಗ್ಯ, ಮನಸ್ವಿನಿ, ಮೈತ್ರಿ, ವಿದ್ಯಾಸಿರಿ, ಹಲವು ಯೋಜನೆಗಳನ್ನು ನಿಷೇಧ ಮಾಡಿದರು ಎಂದು ಟೀಕಿಸಿದರು.

ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು. ಚುನಾವಣೆ ಬರುವವರೆಗೆ ಇದೇ ರೀತಿಯ ಉತ್ಸಾಹ, ಹುಮಸ್ಸು ಇರಲಿ ಎಂದು ಹೇಳಿದರು.

ಮಾಜಿ ಸಚಿವ ಜಮೀರ್ ಆಹ್ಮದ್ ಮಾತನಾಡಿ, ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಮತ್ತೆ ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ. ಹರಿಹರ ನಗರದಲ್ಲಿ ಎಸ್. ರಾಮಪ್ಪ ಶಾಸಕ ರಾಗಿ ಆಯ್ಕೆ ಆಗುತ್ತಾರೆ ಎಂದು ಹೇಳಿದರು.

ಶಾಸಕ ಎಸ್. ರಾಮಪ್ಪ ಮಾತನಾಡಿ, ನಾಡಿನಲ್ಲಿ ಐದು ವರ್ಷಗಳ ಕಾಲ ಸುಭದ್ರ ಆಡಳಿತ ಮಾಡಿ ಅನೇಕ ಜನಪರ ಭಾಗ್ಯಗಳನ್ನು ಕೊಟ್ಟಿರುವ ಸಿದ್ದರಾಮಯ್ಯ ಅವರ ಆಡಳಿತವನ್ನು ಜನರು ಮರೆತಿಲ್ಲ ಎಂದರು.

ಈ ಸಂದರ್ಭದಲ್ಲಿ ಕೆ.ಪಿ. ಸಿ.ಸಿ. ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ,  ಮಾಜಿ ಸಚಿವರಾದ ಜಮೀರ್ ಆಮ್ಮದ್, ಕೆ.ಬಿ. ಕೋಳಿವಾಡ, ಸಲೀಂ ಆಹಮದ್,  ಮಾಜಿ ಸಂಸದ ಐ.ಜಿ. ಸನಧಿ, ಎಂ.ಎಲ್.ಸಿ. ಮೋಹನ್ ಕೊಂಡಜ್ಜಿ, ಮಾಜಿ ಶಾಸಕ ಶಿವಮೂರ್ತಿ ನಾಯ್ಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ನಂದಿಗಾವಿ ಶ್ರೀನಿವಾಸ್, ದೀಟೂರು ಮಹೇಶ್ವರಪ್ಪ, ಕೃಷ್ಣ ಸಾ ಭೂತೆ ಕೆಪಿಸಿಸಿ ಸದಸ್ಯ ಬಿ. ರೇವಣಸಿದ್ದಪ್ಪ. ಜಿಪಂ ಮಾಜಿ ಸದಸ್ಯ ಬಸವಂತಪ್ಪ, ಸೈಯದ್ ಸೈಫುಲ್ಲಾ , ಪ್ರಕಾಶ್ ರಾಥೋಡ್, ನಂದಿಗಾವಿ ಗೋವಿಂದ ಗೌಡ, ನಿಖಿಲ್ ಕೊಂಡಜ್ಜಿ, ನಗರಸಭೆ ಅಧ್ಯಕ್ಷೆ ಶಾಹಿನಾ ಬಾನು, ಡಿ. ಬಸವರಾಜ್ , ಸಿ.ಎನ್. ಹುಲಗೇಶ್, ಸಾಧಿಕ್ ಪೈಲ್ವಾನ್,  ನಾಗೇಂದ್ರಪ್ಪ, ಸಿಗ್ಬತ್ ಉಲ್ಲಾ, ಶಂಕರ್ ಖಟಾವ್ಕರ್,  ಎಂ.ಎಸ್. ಬಾಬುಲಾಲ್, ಬಿ.ಕೆ. ಸೈಯದ್ ರೆಹೆಮಾನ್, ನಾಗಮ್ಮ , ನೇತ್ರಾವತಿ, ವಿದ್ಯಾ, ತಿಪ್ಪೇಸ್ವಾಮಿ, ಬೋಂಗಾಳೆ ಅರುಣ್ ಕುಮಾರ್, ಕೆ.ಪಿ. ಗಂಗಾಧರ, ಜಿಗಳಿ ಆನಂದಪ್ಪ, ಆದಾಪುರ ವೀರಭದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!