ಮಲೇಬೆನ್ನೂರು, ಮಾ.9- ಕೆ.ಬೇವಿನಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಸಲಗನಹಳ್ಳಿಯ ಕೆ.ಡಿ.ವಿಜಯಕುಮಾರ್ ಅವರು ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶ್ರೀಮತಿ ಮಂಜಮ್ಮ ಮಂಜಪ್ಪ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪಿಡಿಓ ಲಕ್ಷ್ಮೀಬಾಯಿ ಸೇರಿದಂತೆ ಗ್ರಾ.ಪಂ.ನ ಎಲ್ಲಾ ಸದಸ್ಯರು ಈ ವೇಳೆ ಹಾಜರಿದ್ದರು.
January 19, 2025