ದಾವಣಗೆರೆ, ಮಾ.7- ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇತ್ತೀಚೆಗೆ ಒಲಂಪಿಯಾಡ್ ಅಬಾಕಸ್ನವರು ನಡೆಸಿದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಜಿಲ್ಲೆಯ ಯೂನಿಕ್ ಅಬಾಕಸ್ನ 24 ವಿದ್ಯಾರ್ಥಿಗಳು ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಮಹಾರಾಷ್ಟ್ರದ ಒಲಂಪಿಯಾಡ್ನ ಫೌಂಡರ್ ಸಾಗರ್ ಆನಂದ ಥ್ರೂಟ್, ಅಡ್ವೊಕೇಟ್ ರುದ್ರೇಗೌಡ, ನಿರ್ದೇಶಕರಾದ ಮೀನಾಕ್ಷಿ ಲಂದೆಯವರ ನೇತೃತ್ವದಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 918 ವಿದ್ಯಾರ್ಥಿಗಳು ಭಾಗವಹಿಸಿದ್ದರು.ಇದರಲ್ಲಿ ಯೂನಿಕ್ ಸಂಸ್ಥೆಯ ವಿದ್ಯಾರ್ಥಿಗಳು 9 ರಾಂಕಿಂಗ್ಗಳು, 11 ಕಾನ್ಸೋಲೇಷನ್ ಹಾಗೂ 4 ಸಮಾಧಾನಕರ ಬಹುಮಾನ ಪಡೆದು ಯೂನಿಕ್ ಅಬಾಕಸ್ಗೆ ಗೌರವ ತಂದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಮಾರ್ಗದರ್ಶನ ನೀಡಿದ ಯೂನಿಕ್ ಅಬಾಕಸ್ನ ಶಿಕ್ಷಕಿ ಸುಮನ್ ತೆಲಗಾವಿಯವರಿಗೆ ಫ್ರಾಂಚೈಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ನ್ಯೂ ಸೇಂಟ್ ಪೀಟರ್ಸ್ ಕಾನ್ವೆಂಟ್ ಮತ್ತು ಜ್ಞಾನ ಗಂಗಾ ಶಾಲೆಯ ಶಿಕ್ಷಕರು ಮತ್ತು ಪೋಷಕರು ಅಭಿನಂದಿಸಿದ್ದಾರೆ.