ಮಲೇಬೆನ್ನೂರು, ಮಾ. 7 – ಸುರಕ್ಷಿತ ಶೌಚಾಲಯ ಮನುಷ್ಯನ ಆರೋಗ್ಯಕ್ಕೆ ಪೂರಕ ಎಂದು ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕರಾದ ಅರುಣಾ ದಿವಾಕರ್ ತಿಳಿಸಿದರು.
ಧೂಳೆ ಹೊಳೆ ಗ್ರಾಮದ ಜಿ.ಎಂ.ಸಿ.ಜಿ. ಪ್ರೌಢಶಾಲೆಯಲ್ಲಿ ತಮ್ಮ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಬಾಲಕಿಯರ ಹೈಟೆಕ್ ಶೌಚಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಶೌಚಾಲಯ ಅತೀ ಮುಖ್ಯವಾದುದು. ಏಕೆಂದರೆ ಮನುಷ್ಯನಿಗೆ ವಿಸರ್ಜಿಸುವ ಮಲದಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಇದರಿಂದ ಅತಿಸಾರ ಭೇದಿಯಂತಹ ಕಾಯಿಲೆಗಳು ಬಂದು ಅವರ ಆರೋಗ್ಯವೇ ಏರುಪೇರಾಗುತ್ತದೆ. ಹಾಗಾಗಿ ಶೌಚಾಲಯ ಬಳಕೆ ಮತ್ತು ನೈರ್ಮಲ್ಯಕ್ಕೆ ಹೆಚ್ಚು ಗಮನ ನೀಡಬೇಕು.
ಮನುಷ್ಯನಿಗೆ ಉತ್ತಮ ಆರೋಗ್ಯ ದೊರೆಯಬೇಕಾದರೆ ಶೌಚಾಲಯ ಬಳಕೆ ಅತ್ಯಗತ್ಯ. ಬಯಲು ಶೌಚದಿಂದ ಮಕ್ಕಳು ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಶೌಚಾಲಯದ ಕೊರತೆಯಿಂದ ಹೆಣ್ಣು ಮಕ್ಕಳು ಹೆಚ್ಚು ತೊಂದರೆಗೆ ಒಳಗಾಗುತ್ತಿದ್ದಾರೆ. ಆ ಉದ್ದೇಶದಿಂದ ನಮ್ಮ ಟ್ರಸ್ಟ್ ವತಿಯಿಂದ ವಿಶೇಷವಾಗಿ ಬಾಲಕಿಯರಿಗೆ ಶೌಚಾಲಯ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ರೆಂಟೋಕಿಲ್ ನ ಇಂಜಿನಿಯರ್ ಸುದೀಪ್ ಮಾತನಾಡಿ, ಶೌಚಾಲಯವನ್ನು ವಿದ್ಯಾರ್ಥಿನಿಯರು ಸ್ವಚ್ಛವಾಗಿಟ್ಟುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸುಧಾರಣಾ ಸಮಿತಿ
ಉಪಾಧ್ಯಕ್ಷ ಹೊಳೆಸಿರಿಗೆರೆಯ ಎನ್.ಜಿ. ನಾಗನಗೌಡ್ರು ವಹಿಸಿದ್ದರು. ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶರಣ್ ಕುಮಾರ್ ಹೆಗಡೆ, ಬಿಳಸನೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಆರ್. ವಿಶ್ವನಾಥ್,
ಶಾಲಾ ಸುಧಾರಣಾ ಸಮಿತಿ ಸದಸ್ಯರಾದ
ಕೆ.ಜಿ. ನಿಜಲಿಂಗಪ್ಪ, ಡಿ.ಪಿ. ವಿರುಪಾಕ್ಷಗೌಡ್ರು,
ಕೆ. ಈಶ್ವರಪ್ಪ, ಕೆ.ಜಿ. ರಾಜು, ಶಾಲಾ ಮುಖ್ಯ ಶಿಕ್ಷಕ ಡಿ.ಎಂ. ಮಂಜುನಾಥಯ್ಯ, ಶಿಕ್ಷಕರಾದ ಜಿ. ನೀಲನಗೌಡ, ಕೆ.ಎಂ. ಗುರುಬಸಯ್ಯ, ಆರ್. ಶಂಕರ್ ನಾಯ್ಕ್,
ಕೆ. ಸಂತೋಷ್ ಕುಮಾರ್, ಜಿ. ಮಲ್ಲಪ್ಪ, ಡಿ.ಹೆಚ್. ವೀರಭದ್ರಯ್ಯ, ದೇವೇಂದ್ರಪ್ಪ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.