ಯುನೈಟೆಡ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ

ಯುನೈಟೆಡ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ

ದಾವಣಗೆರೆ, ಮಾ. 3- ಯುನೈಟೆಡ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಈಚೆಗೆ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ದಾದಾಪೀರ್, ಶಾಲೆಯ ಪ್ರಾಂಶುಪಾಲ ವಾಸಿಂ ಪಾಷಾ, ಕಾರ್ಯದರ್ಶಿ ಕು. ಫಿರ್ದೋಸ್, ಉಪ ಪ್ರಾಂಶುಪಾಲರಾದ ಶ್ರೀಮತಿ ಯಾಸ್ಮಿನ್, ಆಡಳಿತಾಧಿಕಾರಿ ಅಶ್ಫಕ್ ಅಹ್ಮದ್, ಸಂಯೋಜಕಿ ಶ್ರೀಮತಿ ಶರ್ಫುನ್ನೀಸಾ, ನಿರ್ವಹಣಾ ಸದಸ್ಯರಾದ ಅಲ್ಪಾಥ್ ಅಸದಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಜ್ಞಾನದ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಜ್ಞಾನದ ಅರಿವು ಮೂಡಿಸಲು ವೇಷಭೂಷಣ ಧರಿಸಿ, ಪ್ಲಾಸ್ಟಿಕ್ ಬಳಕೆ ಹಾನಿಕಾರ ಎಂಬುದನ್ನು ತಿಳಿಸಲಾಯಿತು.

error: Content is protected !!