ಕೃಷಿ ವಲಯಕ್ಕೆ ಶೇ.50 ಕ್ಕೂ ಹೆಚ್ಚು ಅವಕಾಶ ನೀಡಿ : ಡಾ. ಸಿದ್ಧನಗೌಡ

ಕೃಷಿ ವಲಯಕ್ಕೆ ಶೇ.50 ಕ್ಕೂ ಹೆಚ್ಚು ಅವಕಾಶ ನೀಡಿ : ಡಾ. ಸಿದ್ಧನಗೌಡ

ಪರ್ಯಾಯ ಕೃಷಿ ಹೆಸರಿನಲ್ಲಿ ರೈತರ ಭೂಮಿಯ ಮೇಲೆ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆದರೆ ಸಣ್ಣ ರೈತರು ಪ್ರಯೋಗದಿಂದ ಸಂಕಷ್ಟಕ್ಕೀಡಾಗಿದ್ದು, ಬದಲಾಗಿ ಕೃಷಿ ವಿ.ವಿ.ಗಳಲ್ಲಿ ಮೊದಲು ಪ್ರಯೋಗ ಮಾಡಲಿ ಎಂದು ಪ್ರಶ್ನಿಸಿದ ಅವರು, ಕೃಷಿ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡುವ ನಿಟ್ಟಿನಲ್ಲಿ ಪರ್ಯಾಯ ಕೃಷಿ ಧೋರಣೆಗಳಿಗಾಗಿ ರೈತ ಚಳವಳಿಗಳನ್ನು ಬಲಪಡಿಸುವ ಅಗತ್ಯವಿದೆ.

ಹರಪನಹಳ್ಳಿ, ಮಾ.3 – ಕೃಷಿಕರಲ್ಲಿಯೇ ಕೃಷಿ ಭೂಮಿ ಉಳಿಸುವ ಕಾರ್ಯ ಇರುವುದಿಲ್ಲ. ಹೆಚ್ಚು ಆದಾಯ ಹೊಂದಿರುವವರು ಕೂಷಿ ಭೂಮಿ ಖರೀದಿಸುವಂತಿರಲಿ ಲ್ಲ, ಕೃಷಿ ಭೂಮಿ ಯನ್ನು ಉದ್ಯಮಗಳ ಮೇಲೆ ವಿನಿಯೋಗಿಸಲಾಗುತ್ತಿದೆ ಎಂದ ಅವರು ಸೇವಾವಲಯಕ್ಕೆ ಶೇ.56 ರಷ್ಟು, ಉತ್ಪಾದನಾ ವಲಯ ಕಡಿಮೆಯಾಗಿದೆ, ಕೃಷಿ ವಲಯ ಶೇ.13 ಕ್ಕೆ ಇಳಿದಿದೆ ಆದ್ದರಿಂದ ಕೃಷಿ ವಲಯಕ್ಕೆ ಶೇ.50 ಕ್ಕೂ ಹೆಚ್ಚು ಅವಕಾಶವನ್ನು ನೀಡಬೇಕು ಎಂದು ಎಐಕೆಎಸ್ ರಾಜ್ಯಾಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ್ ಹೇಳಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕೃಷಿ ಸಂಬಂಧಿತ ಕರಾಳ ಕಾಯ್ದೆಗಳಿಗೆ, ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ. ಭೂ ಸುಧಾರಣೆ ಕಾಯ್ದೆ ಬದಲು, ಭೂ ಸ್ವಾಧೀನ ಕಾಯ್ದೆ ಆಗುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದರು.

ಭಾರತ ಕಮ್ಯುನಿಸ್ಟ್ ಪಕ್ಷದಿಂದ ರಾಜ್ಯದಲ್ಲಿ ಗುಲ್ಬರ್ಗ, ಅಳಂದ, ಜೀವರ್ಗಿ, ಕೂಡ್ಲಿಗಿ, ಶಿರಾ, ಕೆಜಿಎಫ್ 6 ಕಡೆಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಉಳಿದಂತೆ ಚಿಕ್ಕಮಗಳೂರು, ಮೂಡಿಗೇರಿ ಬಗ್ಗೆ ಇತರೆ ಕಡೆಗಳಲ್ಲಿ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು. 

ಎಐಕೆಎಸ್ ರಾಜ್ಯ ಕಾರ್ಯದರ್ಶಿ ಪಿ.ವಿ. ಲೋಕೆಶ್ ಮಾತನಾಡಿ, ಸರ್ಕಾರಗಳು ಸೃಷ್ಠಿಸುತ್ತಿರುವ ಕೃಷಿ ಬಿಕ್ಕಟ್ಟಿನ ಹೋರಾಟಕ್ಕಾಗಿ ಐಕ್ಯ ಚಳವಳಿ ಅಗತ್ಯವಿದೆ, ಇದಕ್ಕಾಗಿ ರಾಜ್ಯದಲ್ಲಿ ಎರಡು ಬಾರಿ ಸಂಯುಕ್ತ ಹೋರಾಟ ಸಮಿತಿ ಮೂಲಕ ಸಭೆ ನಡೆದಿವೆ. ದೇಹಲಿ ಮಾದರಿಯಂತೆ ಮುಂದಿನ ದಿನಗಳಲ್ಲಿ ಕಿಸಾನ ಸಂಘಟನೆಗಳ ಸಮನ್ವಯ ಸಮಿತಿ ಅಡಿಯಲ್ಲಿ ಹೋರಾಟ ರೂಪಿಸಲಾಗುವುದು ಎಂದರು.

ಚುನಾವಣೆ ಬಳಿಕ ಕೃಷಿಕರ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಎಲ್ಲಾ ರೈತ ಸಂಘಟನಗಳು ತಮ್ಮ ಭಿನ್ನಾಭಿಪ್ರಾಯ ಬದಿಗೊತ್ತಿ ಹೋರಾಟ ಮಾಡುವ ತುರ್ತು ಅಗತ್ಯ ಇದೆ ಎಂದರು.

ಬೃಹತ್ ಸಮಾವೇಶ: ಸೂರಿಗಾಗಿ ಸಮರ ಜಾಥವು ರಾಜ್ಯದಲ್ಲಿ ಆರಂಭ ಮಾಡಲಾಗಿತ್ತು. ಕೋವಿಡ್‍ನಿಂದಾಗಿ ಸ್ಥಗಿತ್ತಗೊಂಡಿತ್ತು. ಪ್ರಸ್ತುತ ಜಾಥವು ಮುಂದುವರೆದಿದ್ದು, ಇದೇ ದಿನಾಂಕ 9 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಹತ್ತಿರ ಸಾಮೂಹಿಕ ಸಂಘಟನೆಗಳೊಂದಿಗೆ ಬೃಹತ್ ಬಹಿರಂಗ ಸಭೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ಜನಾರ್ಧನ, ಭಾರತೀಯ ಜನಕಲಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ಷಣ್ಮುಖಸ್ವಾಮಿ, ಗುಡಿಹಳ್ಳಿ ಹಾಲೇಶ, ಶಾಂತರಾಜ ಜೈನ್, ಹಲಗಿ ಸುರೇಶ್, ರಮೇಶನಾಯ್ಕ ಇತರರು ಇದ್ದರು.

error: Content is protected !!