ದಾವಣಗೆರೆ, ಮಾ.2- ಭಾರತೀಯ ಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಬುಧವಾರ ನಗರಕಕ್ಕೆ ಆಗಮಿಸಿದ ಯೋಧ ಚನ್ನಬಸು ತುಕ್ಕನ್ನವರ್ ಅವರಿಗೆ ಸುವರ್ಣ ಕರ್ನಾಟಕ ವೇದಿಕೆ ವತಿಯಿಂದ ತಾಯಿ ಭುವನೇಶ್ವರ ಫೋಟೋ ನೀಡುವುದರ ಮೂಲಕ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಂತೋಷ್‍ಕುಮಾರ್, ಕಣವೇಶ್, ಕುಮಾರ್, ಶಿವು, ನಮ್ಮ ಕೈ ಕರುನಾಡ ವೇದಿಕೆಯ ಟಿ.ಮಂಜುನಾಥಗೌಡ, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.