ಮಲೇಬೆನ್ನೂರು, ಮಾ.2- ಸೌಹಾರ್ದತೆ ಸಾರುವ ಇಲ್ಲಿನ ಪ್ರಸಿದ್ಧ ಹಜರತ್ ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಅವರ ಉರುಸು ಗುರುವಾರ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಕವ್ವಾಲಿ ಕಾರ್ಯಕ್ರಮದಲ್ಲಿ ಹಾಡುಗಾರನ ಹಾಡಿಗೆ ಹುಚ್ಚೆದ್ದ ಅಭಿಮಾನಿಗಳು ಹಾಡುಗಾರನ ಮೇಲೆ ನೋಟಿನ ಸುರಿಮಳೆ ಸುರಿಸಿದರು. ಜನರು ಇಡೀ ದಿನ ದರ್ಗಾದಲ್ಲಿ ಚಾದರ ಹೊದಿಸಿ ಪುಷ್ಪಾ ರ್ಚನೆ ಮಾಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಾತ್ರಿ ದರ್ಗಾ ಆವರಣದಲ್ಲಿ ಪ್ರಸಿದ್ಧ ಖವ್ವಾಲರಿಂದ ಹಮ್ಮಿಕೊಂಡಿದ್ದ ಖವ್ವಾಲಿ ಕಾರ್ಯಕ್ರಮವನ್ನು ನೋಡಲು ಅಕ್ಕಪಕ್ಕದ ಊರುಗಳಿಂದ ಜನರು ಆಗಮಿಸಿದ್ದರು. ಪಟ್ಟಣದ ಹೆದ್ದಾರಿ, ಬಸ್ ನಿಲ್ದಾಣ ಸೇರಿದಂತೆ ಎಲ್ಲಾ ಕಡೆಗಳಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು. ಸಿಪಿಐ ಗೌಡಪ್ಪ ಗೌಡ, ಪಿಎಸ್ಐ ಪ್ರಭು ಕೆಳಗಿನಮನೆ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.