ಜಗಳೂರಿನಲ್ಲಿ ನಾಡಿದ್ದು ಕನ್ನಡ ಸಾಹಿತ್ಯ ಸಮ್ಮೇಳನ

ಜಗಳೂರಿನಲ್ಲಿ ನಾಡಿದ್ದು ಕನ್ನಡ ಸಾಹಿತ್ಯ ಸಮ್ಮೇಳನ

ಜಗಳೂರು, ಫೆ. 22 – ಇದೇ ದಿನಾಂಕ 25‌ ರಂದು ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳಕ್ಕೆ ಭರದ ಸಿದ್ಧತೆಗಳನ್ನು ಮಾಡಲಾಗಿದೆ. ಸಮ್ಮೇಳನದ ಯಶಸ್ವಿಗೆ ಎಲ್ಲರೂ  ಕೈಜೋಡಿಸಬೇಕು ಎಂದು  ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎನ್. ಟಿ.
ಎರಿಸ್ವಾಮಿ  ಮನವಿಮಾಡಿದರು. 

ಪಟ್ಟಣದ ಪತ್ರಿಕಾ ಭವನದಲ್ಲಿ ಕಸಾಪದಿಂದ ನಡೆದ ಪತ್ರಿಕಾ ಗೊಷ್ಠಿಯನ್ನುದ್ದೇಶಿಸಿ  ಮಾತನಾಡಿದ  ಅವರು, ಬರದ ನಾಡಿನಲ್ಲಿ  ಎರಡು ದಶಕಗಳ ನಂತರ ಎರಡನೇ ಸಾಹಿತ್ಯ ಸಮ್ಮೇಳನ ಜರುಗಲಿದ್ದು. ಸಮ್ಮೇಳನದ ಅಧ್ಯಕ್ಷತೆ ಯನ್ನು 36 ಕೃತಿಗಳನ್ನು ರಚಿಸಿರುವ  ಪ್ರಾಧ್ಯಾಪಕರಾದ ಪ್ರೊ.ಎಚ್. ಲಿಂಗಪ್ಪ ವಹಿಸುವರು.

ಮಹಾಪೋಷಕರಾಗಿ  ಸಂಸದ ಜಿ.ಎಂ. ಸಿದ್ದೇಶ್ವರ, ಗೌರವಧ್ಯಕ್ಷತೆಯನ್ನು ಎಸ್.ವಿ. ರಾಮಚಂದ್ರ, ಉದ್ಘಾಟನೆಯನ್ನು ಜಾನಪದ ವಿದ್ವಾಂಸ ಡಾ. ಎಂ.ಜಿ. ಈಶ್ವರಪ್ಪ ನೆರವೇರಿಸುವರು. ಮುಸ್ಟೂರು ಓಂಕಾರ ಹುಚ್ಚಲಿಂಗಸ್ವಾಮಿ ದಾಸೋಹ ಮಠದ ಷ.ಬ್ರ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.

ಸಮ್ಮೇಳನದ ಯಶಸ್ವಿಯಾಗಿ ನಡೆಯಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ವಿವಿಧ ಸಂಘಟನೆ ಪದಾಧಿಕಾರಿಗಳು, ಆಹಾರ, ಹಣಕಾಸು ನೊಂದಣಿ, ಸ್ವಾಗತ ಸಮಿತಿಗಳನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.  ಸಮಾರಂಭದಲ್ಲಿ  ಜನಪರ‌ ಚಳವಳಿ , ಸಂಗೀತ, ಕೃಷಿ, ಮಾಧ್ಯಮ ರಂಗದಲ್ಲಿ ಸಾಧನೆಗೈದ 20‌ ಜನ ಸಾಧಕರಿಗೆ ಸನ್ಮಾನಿಸಲಾಗುವುದು ಎಂದರು.

ಕಸಾಪ ತಾಲ್ಲೂಕು ಅಧ್ಯಕ್ಷೆ ಸುಜಾತಮ್ಮ‌ ಮಾತನಾಡಿ, ಬೆಳಿಗ್ಗೆ 7.30 ಕ್ಕೆ ಧ್ವಜಾರೋಹಣ, ಅಂಬೇಡ್ಕರ್ ವೃತ್ತದಿಂದ ಕಲಾತಂಡ, ಕನ್ನಡ ಅಭಿಮಾನಿಗಳೊಂದಿಗೆ  ಸಮ್ಮೇಳನದ ಅಧ್ಯಕ್ಷರಾದ ಪ್ರೊ.ಎಚ್. ಲಿಂಗಪ್ಪ ಅವರ ಅದ್ದೂರಿ ಮೆರವಣಿಗೆ‌ ನಡೆಸಲಾಗುವುದು. ಅನುಭಾವ ಕವಿ ಮಹಲಿಂಗರಂಗ ವೇದಿಕೆ, ನಂತರ ಮೂರು ದ್ವಾರಗಳ ಉದ್ಘಾಟನಾ, ನಂತರ ವೇದಿಕೆ  ಸಮಾರಂಭ, ವೀರಶೈವ ಕಲ್ಯಾಣ ಮಂಟಪದಲ್ಲಿ ಜರುಗಲಿದೆ.  

ಸಾಹಿತ್ಯ ಗೋಷ್ಠಿ, ಸಾಮಾಜಿಕ ಗೋಷ್ಠಿ, ಕವಿ ಗೋಷ್ಠಿ, ಬಹಿರಂಗ ಅಧಿವೇಶನ ನಡೆಯಲಿದ್ದು ಸಂಜೆ 4.30 ಕ್ಕೆ ಸನ್ಮಾನ ಮತ್ತು ಸಮರೋಪ ಸಮಾರಂಭ ನಡೆಯಲಿದೆ.

ಕಸಾಪ ಸಮಿತಿ ಸದಸ್ಯ ಪ್ರಾಂಶುಪಾಲ ಬಿ. ನಾಗಲಿಂಗಪ್ಪ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಿಂದ ಬೇರ್ಪಟ್ಟ ನಂತರ ಇದು ಮೊದಲನೇ ಕನ್ನಡ ಸಾಹಿತ್ಯ ಸಮ್ಮೇಳನ. ಕನ್ನಡ ಮನಸ್ಸುಗಳು ಒಂದಾಗಬೇಕು, ಸಮ್ಮೇಳನ ಕುರಿತು ಜನಸಾಮಾನ್ಯರಿಗೆ ಮಾಧ್ಯಮದ ಮೂಲಕ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಹೇಳಿದರು.

 ಈ ಸಂದರ್ಭದಲ್ಲಿ ಕಸಾಪ ಸದಸ್ಯರಾದ ಓಬಣ್ಣ, ಬೆಲ್ಲದ ಬಸವರಾಜ್, ಚಂಪಾವತಿ, ಮಾರಪ್ಪ, ರಾಜಪ್ಪ ಉಪಸ್ಥಿತರಿದ್ದರು.

error: Content is protected !!