ಗುಣಮಟ್ಟದ ರಾಗಿ ಖರೀದಿಸಿ: ಜಿಲ್ಲಾಧಿಕಾರಿ ಸೂಚನೆ

ಗುಣಮಟ್ಟದ ರಾಗಿ ಖರೀದಿಸಿ: ಜಿಲ್ಲಾಧಿಕಾರಿ ಸೂಚನೆ

ಜಗಳೂರು, ಫೆ.21- ಸಣ್ಣ ರೈತರು ರಾಗಿ ಖರೀದಿ ಕೇಂದ್ರ ಸದ್ಬಳಕೆ ಮಾಡಿಕೊಳ್ಳಬೇಕು ಮತ್ತು ಗುಣಮಟ್ಟದ ರಾಗಿ ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

ಪಟ್ಟಣದ ಎಪಿಎಂಸಿ ಕಚೇರಿ ಆವರಣದಲ್ಲಿ ಇರುವ ರಾಗಿ ಖರೀದಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ, ತೂಕ ಮತ್ತು ಗ್ರೇಡ್ ಗುಣಮಟ್ಟ ಪರೀಕ್ಷಿಸಿ ನಂತರ ಅವರು ಮಾತನಾಡಿದರು. ಅಗತ್ಯ ದಾಖಲಾತಿಗಳನ್ನು ಪಡೆದು ಓಟಿಪಿ ಸಂಖ್ಯೆಯ ಮೂಲಕವೇ ರಾಗಿ ಖರೀದಿಸಬೇಕು. ಖರೀದಿ ಕೇಂದ್ರದಲ್ಲಿ  ಪ್ರತಿ ಕ್ವಿಂಟಾಲ್‌ಗೆ 3578 ರೂ. ದರ ನಿಗದಿಪಡಿಸ ಲಾಗಿದ್ದು, ಇದರ ಸದುಪಯೋಗ ಪಡೆದುಕೊ ಳ್ಳಬೇಕು ಎಂದು ರೈತರಿಗೆ ತಿಳಿಸಿದರು.

ಮ್ಯಾನೇಜರ್‌ಗೆ ತರಾಟೆ: ಖರೀದಿ ಕೇಂದ್ರದ ಮ್ಯಾನೇಜರ್ ಶಂಕರ್ ಹಾಗೂ ಇತರೆ ಅಧಿಕಾರಿಗಳಿಗೆ ಗ್ರೇಡ್ ಯಂತ್ರ, ಮತ್ತು ಜರಡಿ ಬಳಸಿ ಸ್ವಚ್ಛತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದನ್ನು ಕಂಡು ತರಾಟೆ ತೆಗೆದುಕೊಂಡರು.

ಗುಣಮಟ್ಟದ ರಾಗಿ ಖರೀದಿಸಿಲ್ಲ, ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವ ಜೊತೆಗೆ ಸರಿಯಾಗಿ ತೂಕದ ಯಂತ್ರ ನಿರ್ವಹಿಸಬೇಕು. ಅರ್ಹ ಸಣ್ಣ ರೈತರಿಂದ ಮಾತ್ರ ರಾಗಿ ಖರೀದಿ ಮಾಡಬೇಕು ಎಂದು ಖಡಕ್ ಸೂಚನೆ ನೀಡಿದರು. ಜಿಲ್ಲಾಧಿಕಾರಿಯ ಆಗಮನದ ಹಿನ್ನೆಲೆಯಲ್ಲಿ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ಜಾಗೃತಿಯಿಂದ ಕೆಲಸ  ನಿರ್ವಹಿಸುತ್ತಿರುವುದು ಕಂಡು ಬಂದಿತು.

ಇದೇ ಸಂದರ್ಭದಲ್ಲಿ ಉಪವಿಭಾಗಾಧಿ ಕಾರಿ ದುರ್ಗಾಶ್ರೀ, ತಹಶೀಲ್ದಾರ್ ಜಿ.ಸಂತೋಷ್ ಕುಮಾರ್, ಎಪಿಎಂಸಿ  ಕಾರ್ಯದರ್ಶಿ ಗಿರೀಶ್ ನಾಯ್ಕ ಇದ್ದರು.

error: Content is protected !!