ದಾವಣಗೆರೆ, ಫೆ. 19- ದಾವಣಗೆರೆ ಎಸ್.ಜೆ.ಎಂ. ನಗರದ ಚಿಗುರು ವಿದ್ಯಾ ಸಂಸ್ಥೆಯ ಎ.ಪಿ.ಜೆ. ಪಬ್ಲಿಕ್ ಸ್ಕೂಲ್‌ನ 6ನೇ ವಾರ್ಷಿಕೋತ್ಸವ ಆಚರಿಸಲಾಯಿತು. ಶ್ರೀಮತಿ ದಾನಮ್ಮ ಸುಲ್ತಾನಪುರ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸ ಕರಿಯಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗರಾಜ್ ಲೋಕಿಕೆರೆ ಹಾಗೂ ಎನ್.ಹೆಚ್. ಹಾಲೇಶ್ , ವಿ. ಚಂದ್ರಶೇಖರ್ ಹಾಗೂ ಮಕ್ಕಳ ತಜ್ಞ ಡಾ. ಸುರೇಶ್ ಬಾಬು, ಪರಶುರಾಮ್ ಲಕ್ಷ್ಮಣ್ ಭರತ್ ರಾಯಭಾಗಿ ಮತ್ತು ಕೆ.ಎಂ. ಗೀತಾ ಉಪಸ್ಥಿತರಿದ್ದರು.
December 22, 2024