ಜಿಲ್ಲಾ ಕೇಂದ್ರಗಳಲ್ಲಿ ಚಿತ್ರಕಲಾ ಗ್ಯಾಲರಿಗಳ ಅವಶ್ಯಕತೆ ಇದೆ

ಜಿಲ್ಲಾ ಕೇಂದ್ರಗಳಲ್ಲಿ ಚಿತ್ರಕಲಾ  ಗ್ಯಾಲರಿಗಳ ಅವಶ್ಯಕತೆ ಇದೆ

ಕುವೆಂಪು ವಿವಿ ಉಪ ಕುಲಪತಿ ಬಿ.ಪಿ.ವೀರಭದ್ರಪ್ಪ

ಶಿವಮೊಗ್ಗ,ಫೆ.19- ಕಲಾವಿದರು ಕೃತಿಗಳನ್ನು ಬಹಳ ದಿನಗಳ ಶ್ರಮದಿಂದ ರಚಿಸಿರುತ್ತಾರೆ.  ಅವುಗಳನ್ನು ಗ್ಯಾಲರಿಗಳಲ್ಲಿ ಪ್ರದರ್ಶಿಸಲು ಸೂಕ್ತ ಅವಕಾಶ ಸಿಗಬೇಕು. ದೊಡ್ಡ ನಗರಗಳಲ್ಲಿ ಗ್ಯಾಲರಿಗಳಿರುತ್ತವೆ. ಆದರೆ ಜಿಲ್ಲಾ ಕೇಂದ್ರಗಳಲ್ಲಿ  ಗ್ಯಾಲರಿಗಳ ಅವಶ್ಯಕತೆ ಇದೆ ಎಂದು ಕುವೆಂಪು ವಿವಿ ಉಪ ಕುಲಪತಿ ಬಿ.ಪಿ. ವೀರಭದ್ರಪ್ಪ ತಿಳಿಸಿದರು.

ಶಿವಮೊಗ್ಗದಲ್ಲಿ ಕರ್ನಾಟಕ ಸಂಘಧ ಆವರಣದಲ್ಲಿ ಮೊನ್ನೆ ಏರ್ಪಾಡಾಗಿದ್ದ ದಾವಣಗೆರೆಯ ಹಿರಿಯ ಕಲಾವಿದ ಎ. ಮಹಾಲಿಂಗಪ್ಪ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯವಾಗಿ ವಿದ್ಯಾರ್ಥಿಗಳು, ಶಿಕ್ಷ ಕರು, ಪೋಷಕರು ಇಂತಹ ಪ್ರದರ್ಶನ ಗಳಲ್ಲಿ   ಹೆಚ್ಚಾಗಿ ಭಾಗವಹಿಸಬೇಕು.  ಕಲಾ ವಿದ ಮಹಾಲಿಂಗಪ್ಪನವರು ಉತ್ಸಾಹಿ, ಜೊತೆಗೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಪ್ರದರ್ಶನಗಳ ಏರ್ಪಾಡು ಮಾಡುತ್ತಾ 4-5 ದಶಕಗಳಿಂದ ತೊಡಗಿಸಿಕೊಂಡಿ ದ್ದಾರೆ. ಹಲವಾರು ಕಡೆ ಪ್ರದರ್ಶಗಳನ್ನು ಏರ್ಪಡಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಲಲಿತಕಲಾ ಅಕಾಡೆಮಿ ಸಹ ಪ್ರೋತ್ಸಾಹಿಸುತ್ತಿವೆ ಎಂದು ಕುಲಪತಿಗಳು ನುಡಿದರು.

ಕರ್ನಾಟಕ ಸಂಘದ ಅಧ್ಯಕ್ಷ ಎನ್. ಸುಂದರರಾಜ್ ಮಾತನಾಡಿ,  ಕಲಾಕೃತಿಗಳ ಪ್ರದರ್ಶನಕ್ಕೆ ಇಲ್ಲಿಯೂ ಹೆಚ್ಚಿನ ಸವಲತ್ತುಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.

ಕಲಾವಿದ ಮಹಾಲಿಂಗಪ್ಪ ಪ್ರಾಸ್ತಾವಿಕವಾಗಿ ಕಲಾಕೃತಿಗಳ ವೀಕ್ಷಣೆ ಅವುಗಳ ಅರ್ಥೈಸುವಿಕೆ ಕುರಿತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಚಿತ್ರಕಲಾವಿದೆ ಶ್ರೀಮತಿ ಪದ್ಮಶ್ರೀ ಹೆಗ್ಗಡೆಯವರಿಗೆ ಗೌರವ ಡಾಕ್ಟರೇಟ್  ದೊರೆತ ನಿಮಿತ್ತ ಸನ್ಮಾನಿಸಿ, ಗೌರವಿಸಲಾಯಿತು. ದಾವಣಗೆರೆ ಹೋಂ ಗಾರ್ಡ್‌ ಡೆಪ್ಯೂಟಿ ಕಮಾಂಡೆಂಟ್ ಹಾಲಪ್ಪ  ಉಪಸ್ಥಿತರಿದ್ದರು. ಶಿವಾನಂದಪ್ಪ ಪ್ರಾರ್ಥಿಸಿದರು. ಶಿವಮೊಗ್ಗ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ದೀಪು ಸ್ವಾಗತಿಸಿದರು.

error: Content is protected !!