ಗ್ರಾ. ಪಂ.ಅಧ್ಯಕ್ಷೆ ಮಂಜುಳಾ ಕೋಗುಂಡೆ ಕರಿಬಸಪ್ಪ
ಭರಮಸಾಗರ, ಫೆ.19- ಸರ್ವಜ್ಞನ ವಚನಗಳಲ್ಲಿ ಸಾರ್ವತ್ರಿಕ ಸತ್ಯವನ್ನು ಎಲ್ಲಾ ಕಾಲಗಳಿಗೂ ಹೊಂದುವಂತೆ ಹೇಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳಾ ಕೋಗುಂಡೆ ಕರಿಬಸಪ್ಪ ತಿಳಿಸಿದರು.
ಅವರು ಬಾಪೂಜಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿಯ ಪ್ರಯುಕ್ತ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಭಾಷೆಯಲ್ಲಿ ಸರ್ವಧರ್ಮಗಳಿ ಗನುಗುಣವಾಗಿ ದಾನ-ಧರ್ಮ, ಜೀವನ ರೀತಿ-ನೀತಿಗಳನ್ನು ಸಾರ್ವಕಾಲಿಕವಾಗಿ ತಿಳಿಸಿದ್ದಾರೆ.
ಅವರ ವಚನಗಳನ್ನು ತ್ರಿಪದಿಗಳೆಂದು ಕರೆಯಲಾಗಿದ್ದು, ಅಂತಹ ಸರ್ವಜ್ಞ ಮೂರ್ತಿಯು ನಮ್ಮ-ನಿಮ್ಮೆಲ್ಲರಲ್ಲಿಯೂ ಹಾಸುಹೊಕ್ಕಾಗಿದ್ದಾರೆ. ಯಾರಾದರೂ ಸ್ವಲ್ಪ ತಿಳಿದಂತೆ ಮಾತನಾಡಿದರೆ ಅವರಿಗೆ ನಾವು `ಸರ್ವಜ್ಞ ಮೂರ್ತಿ’ ಎಂದು ಹೇಳುತ್ತೇವಲ್ಲ ಹಾಗೆ, ಸರ್ವಜ್ಞ ಜನರ ಜೀವನದಲ್ಲೂ ಸಹ ಬೆರೆತು ಹೋಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವೃತ್ತ ನಿರೀಕ್ಷಕ ರಮೇಶ್ ರಾವ್ ಮಾತನಾಡಿ, ಹೆಣ್ಣು ಮಕ್ಕಳ ಸುರ ಕ್ಷತೆಯ ಬಗ್ಗೆ ಮತ್ತು ಕಾಳಜಿಯನ್ನು ವಹಿಸುವಂತೆ ತಿಳಿಸಿ ದರು. ಪೋಕ್ಸೋ ಕಾಯ್ದೆಯ ಬಗ್ಗೆ ಮಕ್ಕಳಿಗೆ ತಿಳಿಸಿದರು. ಕುಂಬಾರ ಮಹಾಮಂಡಳಿ ಅಧ್ಯಕ್ಷೆ ಬೈಲಮ್ಮ ಮಾತ ನಾಡಿ, ಸರ್ವಜ್ಞ ಕುಂಬಾರ ಜನಾಂಗದವರಾಗಿದ್ದು ಸುಮಾರು ವಚನಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ಸಮಾಜ ಶಾಸ್ತ್ರ ಉಪನ್ಯಾಸಕರಾದ ಡಾ|| ಎನ್. ಮಮತಾ, ಸರ್ವಜ್ಞ ಮೂರ್ತಿಯ ಬಗ್ಗೆ ಉಪನ್ಯಾಸ ನೀಡಿದರು. ಸುನಂದ ಸ್ವಾಗತಿಸಿದರು.