ಎಸ್.ಎಲ್.ಎನ್ ಕಾನ್ವೆಂಟ್ ವಾರ್ಷಿಕೋತ್ಸವ 

ಎಸ್.ಎಲ್.ಎನ್ ಕಾನ್ವೆಂಟ್ ವಾರ್ಷಿಕೋತ್ಸವ 

ದಾವಣಗೆರೆ, ಫೆ.14- ನಗರದ  ಎಸ್.ಎಲ್. ಎನ್   ಕಾನ್ವೆಂಟ್  ಶಾಲೆಯ  24ನೇ  ವಾರ್ಷಿಕೋತ್ಸವ  ಹಾಗೂ  ಪ್ರತಿಭಾ ಪುರಸ್ಕಾರ ಸಮಾರಂಭವು   ಶ್ರೀ   ಚನ್ನಗಿರಿ   ವಿರುಪಾಕ್ಷಪ್ಪ ಕಲ್ಯಾಣ  ಮಂಟಪದಲ್ಲಿ  ಜರುಗಿತು.  ಅತಿಥಿಗಳಾಗಿ ಕಲಾನಿಕೇತನ ಕಾಲೇಜ್ ಆಫ್ ಫ್ಯಾಷನ್ ಡಿಸೈನಿಂಗ್ ಆಡಳಿತಾಧಿಕಾರಿ ಶ್ರೀಮತಿ ಅಶ್ವಿನಿ ಕಾಟ್ವೆ ರಾಯ ಭಾಗಿ, ಸಂಯುಕ್ತ ಪದವಿ ಪೂರ್ವ ಕಾಲೇಜ್   ಕನ್ನಡ ಉಪ ನ್ಯಾಸಕಿ ಶ್ರೀಮತಿ ಈ. ಉಷಾ ಆಗಮಿಸಿದ್ದರು.  ಶಾಲೆಯ   ಮುಖ್ಯಸ್ಥೆ   ಸುಜಾತ  ನಾಗೇಶ್   ಅಧ್ಯಕ್ಷತೆ  ವಹಿಸಿದ್ದರು.

ಶಾಲೆಯ ಪುಟ್ಟ ಮಕ್ಕಳು ವಿವಿಧ ವೇಷ ಭೂಷಣ ಧರಿಸಿ ಗಮನ ಸೆಳೆದರು. ಸಾಂಸ್ಕೃತಿಕ ಸ್ಪರ್ಧೆಯಲ್ಲಿ   ಭಾಗವಹಿಸಿ  ಬಹುಮಾನ ಗೆದ್ದರು.   ಕಳೆದ  ಶೈಕ್ಷಣಿಕ ವರ್ಷದಲ್ಲಿ  ಅತಿ ಹೆಚ್ಚು  ಅಂಕ ಗಳಿಸಿದ ವಿದ್ಯಾರ್ಥಿಗಳಾದ   ಸಾನ್ವಿ  ಬಂಡಿ,   ರಕ್ಷಾ , ಪ್ರೇಕ್ಷ  ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು .

ಫ್ರೀ-ನರ್ಸರಿನಲ್ಲಿ ಶಾನ್ವಿತ್ ಪ್ರಥಮ,  ಅಭಿನವ ದ್ವಿತೀಯ, ಗ್ರೀಷ್ಮ  ತೃತೀಯ ಬಹುಮಾನ ಪಡೆದರು. ಎಲ್.ಕೆ. ಜಿ, ಯಲ್ಲಿ  ಶಿವಾನಿ  ಪ್ರಥಮ, ಗಗನ ದ್ವಿತೀಯ, ಶಾನ್ವಿ ಕೆ.ಎಂ. ತೃತೀಯ. ಯು. ಕೆ. ಜಿಯಲ್ಲಿ    ಗಹನ್  ಪ್ರಥಮ,  ಆಯುಷಿ ದ್ವಿತೀಯ, ಹರಿಚರಣ ತೃತೀಯ    ಬಹುಮಾನ ಪಡೆದರು.  ನಾಗೇಶ್ ಸ್ವಾಗತಿಸಿದರು, ವಿಜಯ ವೀರೇಂದ್ರ ನಿರೂಪಿಸಿದರು.  

error: Content is protected !!