ಮಲೇಬೆನ್ನೂರು, ಫೆ.12- ಜಿಗಳಿ ಗ್ರಾಮದ ಗ್ರಾ.ಪಂ. ಕಛೇರಿ ಮತ್ತು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಗ್ರಾ.ಪಂ. ಕಛೇರಿ ಆವರಣದಲ್ಲಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ವಿನೋದ ಜಿ.ಆರ್. ಹಾಲೇಶ್‌ಕುಮಾರ್ ಮತ್ತು ಸ.ಹಿ.ಪ್ರಾ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ.ಆರ್ ನಾಗರಾಜ್ ಧ್ವಜಾರೋಹಣ ಮಾಡಿ ವಂದನೆ ಸ್ವೀಕರಿಸಿದರು.
ಗ್ರಾ.ಪಂ. ಉಪಾಧ್ಯಕ್ಷ ಕೆ.ಜಿ. ಮಹಾಂತೇಶ್ ಸದಸ್ಯರಾದ ಡಿ.ಎಂ ಹರೀಶ್, ಕೆ.ಜಿ. ಬಸವರಾಜ್, ಆನಂದಗೌಡ, ದೇವರಾಜ್, ಶ್ರೀಮತಿ ಕರಿಯಮ್ಮ, ಶ್ರೀಮತಿ ಮಂಜುಳಾ ಪರಮೇಶ್ವರಪ್ಪ, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಬಿ.ಎಂ ದೇವೇಂದ್ರಪ್ಪ, ಎಂ.ವಿ ನಾಗರಾಜ್, ಡಿ.ಸಿ.ಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ, ಗ್ರಾಮದ ಮುಖಂಡರಾದ ಜಿ.ಎಂ ಆನಂದಪ್ಪ, ಬಿಳಸನೂರು ಚಂದ್ರಪ್ಪ, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ಲಕ್ಕೆಗೊಂದಿ ರುದ್ರಗೌಡ, ಡಾ.ನಾಗರಾಜ್, ಜಿ.ಪಿ. ಹನುಮಗೌಡ, ಜಿ.ಆರ್. ಚಂದ್ರಪ್ಪ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷಿ ಶ್ರೀಮತಿ ಸುನಿತಾ ನಾಗರಾಜ್, ಪತ್ರಕರ್ತ ಪ್ರಕಾಶ್, ಪಿಡಿಓ ಉಮೇಶ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಧಾ, ಶಿಕ್ಷಕರಾದ ನಾಗೇಶ್, ಗುಡ್ಡಪ್ಪ, ಮಲ್ಲಿಕಾರ್ಜುನ, ಲಿಂಗರಾಜ್, ಲೊಕೇಶ್, ಕುಸುಮ, ದೀಪಾ, ವೀಣಾ, ಗ್ರಾ.ಪಂ ನ ಬಿ.ಮೌನೇಶ್, ಬಸವರಾಜಯ್ಯ ಮತ್ತು ಇತರರು ಭಾಗವಹಿಸಿದ್ದರು.