ರಾಜ್ಯಮಟ್ಟದ ಭಜನಾ ಸ್ಪರ್ಧೆ ಉದ್ಘಾಟಿಸಿದ ಶಾಸಕ ಅರುಣ್‌ಕುಮಾರ್
ರಾಣೇಬೆನ್ನೂರು, ಫೆ.12- ಆಧುನಿಕ ಯುಗದ ಭರಾಟೆಯಲ್ಲಿ ಜಾನಪದ ಕಲೆಗಳು ನಶಿಸಿ ಹೋಗುತ್ತಿದ್ದು, ಇಂದಿನ ಯುವ ಪೀಳಿಗೆ ಜಾನಪದ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಪರಂಪರೆಯನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಶಾಸಕ ಅರುಣಕುಮಾರ ಪೂಜಾರ್ ಹೇಳಿದರು.
ನಗರದ ಯರೇಕುಪ್ಪಿ ರಸ್ತೆಯ ಶ್ರೀ ನೀಲಕಂಠೇಶ್ವರ ದೇವಸ್ಥಾನ ಆವರಣದ ಶ್ರೀ ಗಣೇಶೋತ್ಸವ ಮಂಟಪದಲ್ಲಿ ಶನಿವಾರ ಸ್ಥಳೀಯ ಕಾಕಿ ಜನಸೇವಾ ಸಂಸ್ಥೆ, ಕುರುಹಿನ ಶೆಟ್ಟಿ ಸಮಾಜ ಸೇವಾ ಸಂಘ, ಜೆಸಿಐ ಘಟಕ ಹಾಗೂ ಜೇಸಿಸ್ ಕ್ಷೇಮಾಭಿವೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮತ್ತು ಸೌರಭ ಜಾನಪದ ಕಲಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ದಿ.ದೊಡ್ಡನಾಗಪ್ಪ ಕಾಕಿ ಹಾಗೂ ದಿ. ಸಣ್ಣನಾಗಪ್ಪ ಕಾಕಿ ಇವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ ರಾ ಜ್ಯಮಟ್ಟದ ಭಜನಾ ಸ್ಪರ್ಧೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ವಜ್ಞ, ಶಿಶುನಾಳ ಷರಿಫರು ಕನಕದಾಸ, ಗದುಗಿನ ಕುಮಾರವ್ಯಾಸರ ಸೇರಿದಂತೆ ಅನೇಕ ಮಹನೀಯರು ರಚಿಸಿದ ಜನಪದ ಸಾಹಿತ್ಯ ಹಾಗೂ ಕಾವ್ಯಗಳಲ್ಲಿ ಅಭೂತಪೂರ್ವ ತತ್ವ ಶಕ್ತಿಗಳು ಅಡಗಿವೆ. ಇಂತಹ ನಾಡಿನ ನೆಲ, ಜಲ, ಧರ್ಮ, ಸಂಸ್ಕೃತಿ, ಪರಂಪರೆ ಹಾಗೂ ಗ್ರಾಮೀಣ ಸೊಗಡು ಬಿಂಬಿಸುವ ಜಾನಪದ ಕಲೆ ಮತ್ತು ಸಾಹಿತ್ಯಗಳು ಕುರಿತು ತಿಳಿಸುವ ಕಾರ್ಯ ಮಾಡುತ್ತಿರುವುದು ಶ್ಲ್ಯಾಘನೀಯವಾಗಿದೆ. ಸಮಾಜದ ಅಭಿವೃದ್ಧಿಗೆ ಸದಾ ಕೆಲಸ ಮಾಡುತ್ತಿರುವುದು ಕಾಕಿ ಮನೆತನ. ಬಡವರಿಗೆ ನಿವೇಶನ ಸೇರಿದಂತೆ ಅನೇಕ ಯೋಜನೆ ಹಮ್ಮಿಕೊಂಡಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಮಾತನಾಡಿ, ಹಿಂದಿನ ಕಾಲದಲ್ಲಿ ಜನಪದಕ್ಕೆ ಹೆಚ್ಚಿನ ಮಹತ್ವವಿತ್ತು. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೊಳ ಗಾಗಿ ಯುವ ಜನಾಂಗ ಹಾಳಾಗುತ್ತಿದೆ. ಇಂತಹ ಕಾರ್ಯಕ್ರಮ ಗಳ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದೇವೆ. ನಾಡಿನ ಜಾನಪದ ಕಲೆ, ಸಂಸ್ಕೃತಿ ಉಳಿಸಿಕೊಂ ಡಾಗ ಮಾತ್ರ ಸ್ವಾಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕಾಕಿ ಜನ ಸೇವಾ ಸಂಸ್ಥೆ ವತಿಯಿಂದ ಅಂಧ ಮಕ್ಕಳಿಗೆ ಬಟ್ಟೆ ಕಿಟ್ ವಿತರಣೆ, ಕ್ಷಯ ರೋಗಿಗಳ ಆಹಾರ ಕಿಟ್ ಹಾಗೂ ದತ್ತು ಕಾರ್ಯಕ್ರಮ, ಕುರುಹಿನಶೆಟ್ಟಿ ಕೇಂದ್ರ ಸಂಘಕ್ಕೆ ಆಯ್ಕೆಯಾದ ಶಿವಾನಂದ ಸಾಲಗೇರಿ ಹಾಗೂ ಸಾಧನೆಗೈದ ಯುವಕರನ್ನು ಸನ್ಮಾನಿಸಲಾಯಿತು.
ನಗರಸಭೆ ಸದಸ್ಯರಾದ ಮಲ್ಲಿ ಕಾರ್ಜುನ ಅಂಗಡಿ, ರಾಘವೇಂದ್ರ ಕುಲ ಕರ್ಣಿ, ಶಿವಕುಮಾರ ನರಸಗೊಂಡರ, ಮಂಜುನಾಥ ಕಾಟಿ, ಪವನಕುಮಾರ ಮಲ್ಲಾಡದ, ಕುರುಹಿನಶೆಟ್ಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಖಜಾಂಚಿ ಹನುಮಂತಪ್ಪ ಕಾಕಿ, ಸಣ್ಣ ಹನುಮಂತಪ್ಪ ಕಾಕಿ, ಭೀಮಣ್ಣ ಕಾಕಿ, ರೂಪಾ ಕಾಕಿ, ಶೋಭಾ ಹೊಸಪೇಟೆ, ಕುಮಾರ ಶ್ಯಾವಿ, ರೇಣುಕಾ ಅಮಾಸಿ, ಚನ್ನಪ್ಪ ಮಾನಕನಹಳ್ಳಿ, ಭೋಜಪ್ಪ ಕನಕೇರಿ, ಸಿದ್ದಪ್ಪ ಬೂದ ನೂರು, ಗುಡದಯ್ಯ ಹಲಗೇರಿ, ಶಿವಾನಂದ ಬಗಾದಿ, ವಿ.ಸಿ.ಹಿರೇಮಠ, ಪ್ರಭು ಎಳೆಹೊಳೆ, ನಾಗರಾಜ ಹೊಸ ಪೇಟೆ ಸೇರಿದಂತೆ ಮತ್ತಿತರು ಇದ್ದರು.