ದಾವಣಗೆರೆ, ಫೆ. 8- ಮೊನ್ನೆ ನಗರಕ್ಕೆ ಆಗಮಿಸಿದ್ದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯ ಕೆಪಿಸಿಸಿ ವೀಕ್ಷಕರಾದ ಪ್ರಣತಿ ಸುಶೀಲ್‍ಕುಮಾರ್ ಶಿಂಧೆ ಅವರನ್ನು ಭೇಟಿ ಮಾಡಿದ ಕೆಪಿಸಿಸಿ ಎಸ್ಸಿ ಘಟಕದ ಕಾರ್ಯಕಾರಿಣಿ ಸಮಿತಿ ಸದಸ್ಯ ಹೆಚ್. ದುಗ್ಗಪ್ಪ ಅವರು ತಮಗೆ ಮಾಯಕೊಂಡ ಮೀಸಲು ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿರುವ ಅವರು, ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ಬೆಲೆ ಏರಿಕೆ, ನೋಟ್‍ಬ್ಯಾನ್, ಜಿಎಸ್‍ಟಿ, ಸರ್ಕಾರಿ ಇಲಾಖೆಗಳ ಖಾಸಗೀಕರಣ, ಶೇ.40ರಷ್ಟು ಕಮೀಷನ್ ಅಕ್ರಮ ಸೇರಿದಂತೆ ಬಿಜೆಪಿಯ ದುರಾಡಳಿತ ಮತ್ತು ಭ್ರಷ್ಟಾಚಾರದ ಬಗ್ಗೆ ಈಗಾಗಲೇ ತಾವು ಕ್ಷೇತ್ರದ ಜನರಿಗೆ ಮನವರಿಕೆ ಮಾಡಿಕೊಟ್ಟಿರುವುದಾಗಿ ಹೇಳಿದರು.
ಹೆಚ್. ದುಗ್ಗಪ್ಪ ಅವರೊಂದಿಗೆ ಅವರ ಪುತ್ರ ಡಿ. ಮನು ಉಪಸ್ಥಿತರಿದ್ದರು.