ಮಕ್ಕಳ ಪ್ರಗತಿಗೆ ಕಲಿಕಾ ಹಬ್ಬ ಸಹಕಾರಿ

ಮಕ್ಕಳ ಪ್ರಗತಿಗೆ ಕಲಿಕಾ ಹಬ್ಬ ಸಹಕಾರಿ

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಪ್ಪೇಶಪ್ಪ

ದಾವಣಗೆರೆ, ಫೆ.8- ವಿದ್ಯಾರ್ಥಿಗಳ ಕಲಿಕೆಗೆ ಕಲಿಕಾ ಹಬ್ಬ ಪೂರಕವಾಗಲಿದೆ ಎಂದು ಡಿ.ಡಿ.ಪಿ.ಐ ತಿಪ್ಪೇಶಪ್ಪ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ದಾವಣಗೆರೆ ಉಪ ನಿರ್ದೇಶಕರು (ಆಡಳಿತ) ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ದೊಡ್ಡಬಾತಿಯ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ನಡೆದ ಜಿಲ್ಲಾಮಟ್ಟದ ಕಲಿಕಾ ಹಬ್ಬ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಿಕಾ ಹಬ್ಬ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳನ್ನು ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶವಾಗಿದೆ. 

ಈ ಹಬ್ಬ ಸಂಪೂರ್ಣವಾಗಿ ಮಗುವಿನ ಒಂದು ಸ್ವಕಲಿಕಾ ವಿಧಾನವಾಗಿದೆ.

107 ಕ್ಲಾಸ್‍ನಲ್ಲಿ 300 ವಿದ್ಯಾರ್ಥಿಗಳು ಕಲಿಕಾರ್ಥಿಗಳಾಗಿ ಭಾಗವಹಿಸಿದ್ದು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳಲ್ಲಿ ಉತ್ಸಾಹ, ಉಲ್ಲಾಸ ಮೂಡುತ್ತದೆ. ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಲಿದೆ. ಕಲಿಕಾ ಹಬ್ಬದಲ್ಲಿ ಮಕ್ಕಳಿಗೆ ಕಲಿಸುವ ವಿಷಯಗಳು ವಿಶೇಷವಾಗಿವೆ. ಇದರಿಂದ ಮಕ್ಕಳ ಮುಂದಿನ ಭವಿಷ್ಯಕ್ಕೆ ನೆರವಾಗಲಿದೆ ಎಂದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕಿ ಗೀತಾ ಎಸ್, ಜಿಲ್ಲಾ ನೊಡಲ್ ಅಧಿಕಾರಿ ರವಿ, ತಾಲ್ಲೂಕು ಮಟ್ಟದ ಶಿಕ್ಷಣಾಧಿಕಾ ರಿಗಳು, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶೃತಿ ರಾಜೇಂದ್ರ, ದೊಗ್ಗಳ್ಳಿ ವೀರೇಶ್ ಭಾಗವಹಿಸಿದ್ದರು.

error: Content is protected !!