ದಾವಣಗೆರೆ, ಫೆ.6- ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಯುಗಪುರುಷ ಎಂದೇ ಖ್ಯಾತರಾದ ಶ್ರೀ ಸವಿತಾ ಮಹರ್ಷಿಗಳ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ತಿಳಿಸಿದರು.
ಜಿಲ್ಲಾಡಳಿತ ಭವನ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಸವಿತಾ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಸವಿತಾ ಮಹರ್ಷಿ ಸಮುದಾಯ ಭವನದಲ್ಲಿ ನಡೆದ ಶ್ರೀ ಸವಿತಾ ಮಹರ್ಷಿ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಕಲ ಜೀವರಾಶಿಗಳಿಗೆ ಸೂರ್ಯನು ಹೇಗೆ ಅವಶ್ಯಕ ವಾಗಿದ್ದಾನೋ ಹಾಗೆ ಆಧುನಿಕ ಕಾಲದ ಸಕಲರಿಗೂ ಸವಿತಾ ಸಮಾಜದ ಸೇವೆ ಅಗತ್ಯವಾಗಿದೆ. ಧಾರ್ಮಿಕ ವಾಗಿ ಶಿವನ ಎಡಗಣ್ಣಿನಿಂದ ಹುಟ್ಟಿದ ಸವಿತಾ ಮಹರ್ಷಿ ಯು ದೇವಾನುದೇವತೆಗಳ ಆಯುಷ್ಕಾರ್ಯಗಳನ್ನು ಮಾಡುತ್ತಿದ್ದ, ಈ ನಿಟ್ಟಿನಲ್ಲಿ ಸಮಾಜದವರು ಕೂಡ ವೃತ್ತಿಯನ್ನಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ತಳ ಸಮುದಾಯದ ಸವಿತಾ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸದೃಢರಾಗಿ, ಸಂಘಟಿತರಾಗುವ ಮೂಲಕ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಬಾಲರಾಜು, ವಿಶೇಷ ಉಪನ್ಯಾಸ ವೆಂಕಟಚಲಪತಿ, ರಂಗಸ್ವಾಮಿ, ಹನುಮಂತಪ್ಪ, ಪರಶುರಾಮ್ ಇತರರು ಉಪಸ್ಥಿತರಿದ್ದರು.