ಮಲೇಬೆನ್ನೂರು, ಫೆ.3- ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ನೂತನ ಅಧ್ಯಕ್ಷರಾಗಿ ಬಿ.ಪ್ರಭಾಕರ್ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ರೇಣುಕಮ್ಮ ಹುಳ್ಳೇರ ನಿಂಗಪ್ಪ ಅವರನ್ನು ಎಸ್ಡಿಎಂಸಿ ಸದಸ್ಯರ, ಪೋಷಕರ ಹಾಗೂ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ಎಂ.ಆರ್.ನಾಗರಾಜ್ ಮತ್ತು ಶ್ರೀಮತಿ ಸುನೀತಾ ನಾಗರಾಜ್ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳು ತೆರವಾಗಿದ್ದವು. ನೂತನ ಅಧ್ಯಕ್ಷ ಬಿ.ಪ್ರಭಾಕರ್, ಹಾ.ಉ.ಸ. ಸಂಘದ ಮಾಜಿ ಕಾರ್ಯದರ್ಶಿ ಬಿ.ಬಾಲಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ದೇವೇಂದ್ರಪ್ಪ, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಮುಖಂಡರಾದ ಜಿ.ಎಂ.ಆನಂದಪ್ಪ, ಜಿ.ಆರ್.ಹಾಲೇಶ್ ಕುಮಾರ್, ಕೆ.ಎಸ್.ನಂದ್ಯೆಪ್ಪ, ಕೆ.ಎಂ.ರಾಮಪ್ಪ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಜಿ.ಆರ್.ಚಂದ್ರಪ್ಪ, ಎಸ್ಡಿಎಂಸಿ ಸದಸ್ಯರಾದ ಎಂ.ಆರ್.ನಾಗರಾಜ್, ಶ್ರೀಮತಿ ಸುನೀತಾ ನಾಗರಾಜ್, ವಿಜಯ ಭಾಸ್ಕರ್, ಶ್ರೀಮತಿ ಮಂಜಮ್ಮ ಮಾಲತೇಶ್, ಗಂಗಾಧರಚಾರಿ, ನಾಗರಸನಹಳ್ಳಿ ಕಲ್ಲೇಶ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಧಾ, ಶಿಕ್ಷಕರಾದ ನಾಗರಾಜ್, ಮಲ್ಲಿಕಾರ್ಜುನ್, ಲಿಂಗರಾಜ್, ಗುಡ್ಡಪ್ಪ, ಶ್ರೀನಿವಾಸ್ ರೆಡ್ಡಿ ಸೇರಿದಂತೆ ಎಲ್ಲಾ ಶಿಕ್ಷಕರು ಈ ವೇಳೆ ಹಾಜರಿದ್ದರು.