ಕಣ್ಮರೆಯಾಗುತ್ತಿರುವ ಜನಪದ ಕಲೆ

ಕಣ್ಮರೆಯಾಗುತ್ತಿರುವ ಜನಪದ ಕಲೆ

ಜಾನಪದ ಕಲಾ ಪ್ರದರ್ಶನ, ವಿಚಾರ ಗೋಷ್ಠಿಯಲ್ಲಿ ಹಿರಿಯ ನ್ಯಾಯವಾದಿ ಎಲ್.ಹೆಚ್. ಅರುಣ್‌ ಕುಮಾರ್

ದಾವಣಗೆರೆ, ಫೆ.2- ಆಧುನಿಕತೆಯ ಮೊಬೈಲ್ ಹಾಗೂ ಅಂತರ್ಜಾಲ ತಂತ್ರ ಜ್ಞಾನ ಯುಗದಲ್ಲಿ ಮೂಲ ಸಾಂಸ್ಕೃತಿಕ ಬೇರುಗಳು, ಗ್ರಾಮೀಣ ಜನಪದ ಕಲೆಗಳು ಕಣ್ಮರೆಯಾಗುತ್ತಿವೆ ಎಂದು ಹಿರಿಯ ನ್ಯಾಯವಾದಿ ಎಲ್.ಹೆಚ್. ಅರುಣ್‌ ಕುಮಾರ್ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಜಾನಪದ ಕಲಾ ಪ್ರದರ್ಶನ, ವಿಚಾರ ಗೋಷ್ಠಿ, ಜಾನ ಪದ ಗೀತೆಗಳ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾನಪದ ಸಾಹಿತ್ಯ ಮತ್ತು ಗ್ರಾಮೀಣ ಜನಪದ ಕಲೆಗಳನ್ನು ಉಳಿಸಿ, ಬೆಳೆಸುವಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು. ವೀರ ಗಾಸೆ, ಡೊಳ್ಳು, ತಮಟೆ, ತತ್ವಪದ, ಸೋ ಬಾನೆ ಪದ ಸೇರಿದಂತೆ ಅನೇಕ ಜನಪದ ಕಲೆಗಳನ್ನು  ಇಂದಿಗೂ ಜೀವಂತವಾಗಿಟ್ಟು ಕೊಂಡು ಬರಲಾಗಿದೆ ಎಂದರು.

ಕಲಾವಿದರು ಕಲೆಗಳನ್ನು ವೃತ್ತಿಯನ್ನಾಗಿ ಮಾಡಿಕೊಳ್ಳದೇ ಪ್ರವೃತ್ತಿಯನ್ನಾಗಿಸಿ ಕೊಳ್ಳುವ ಜೊತೆಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಕರೆ ನೀಡಿದರು.

ಜಗತ್ತಿನ ಎಲ್ಲಾ ಸಾಹಿತ್ಯಕ್ಕೆ ಮೂಲ ಪ್ರೇರಣೆ ಹಾಗೂ ಮಾರ್ಗದರ್ಶಕ ಜಾನಪದ ಸಾಹಿತ್ಯ. ಕ್ರಿ.ಪೂ. 4 ಸಾವಿರ ವರ್ಷಗಳವರೆಗೂ ಸಹ ನಮ್ಮಲ್ಲಿ ಯಾವುದೇ ಲಿಖಿತ ಸಾಹಿತ್ಯ ಇರಲಿಲ್ಲ. ಬಾಯಿಂದ ಬಾಯಿಗೆ, ತಲ ತಲಾಂತರದಿಂದ ಹರಿದು ಬಂದ ಸಾಹಿತ್ಯ ಜನಪದ ಸಾಹಿತ್ಯ. ಜನಪದ ಸಾಹಿತ್ಯ ಮಾನವನ ಬದುಕಿನೊಂದಿಗೆ ನಿರಂತರ ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂದು ಹೇಳಿದರು.

ಯಕ್ಷಗಾನ, ಮೂಡಲಪಾಯ, ಬಯಲಾಟದ ಸ್ಥಿತಿಗತಿಗಳ ಕುರಿತು ಚನ್ನಗಿರಿ ತಾಲ್ಲೂಕು ಹವ್ಯಾಸಿ ಗ್ರಾಮೀಣ ವಿವಿಧ ಕಲಾವಿದರ ಒಕ್ಕೂಟದ ಅಧ್ಯಕ್ಷ ಬಿ.ಇ. ತಿಪ್ಪೇಸ್ವಾಮಿ ಮಾತನಾಡಿದರು.

ನಿವೃತ್ತ ಪ್ರಾಚಾರ್ಯ ಡಾ. ಜಿ. ಸಿದ್ದಪ್ಪ, ರಂಗ ಕಲಾವಿದ ಕಡಬಗೆರೆ ಡಾ. ಎ. ಶಿವನಗೌಡ್ರು ಮಾತನಾಡಿದರು. ಬಸಾಪು ರದ ಶ್ರೀ ರೇವಣಸಿದ್ಧೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಎಸ್. ನಾಗರಾಜಪ್ಪ ಮೆಳ್ಳೇಕಟ್ಟೆ ಅಧ್ಯಕ್ಷತೆ ವಹಿಸಿದ್ದರು.

ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ಎನ್.ಎಸ್. ರಾಜು ಉಪಸ್ಥಿತರಿ ದ್ದರು. ಚನ್ನಗಿರಿಯ ವಾಣಿಶ್ರೀ ನಿರೂಪಿಸಿದರು. ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು ತಮ್ಮ ಕಲಾ ಪ್ರದರ್ಶನ ನೀಡಿದರು. 

error: Content is protected !!