ಮಲೇಬೆನ್ನೂರು, ಫೆ.1- ಭಾನುವಳ್ಳಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಂಭವಿ ಸಿದ ಘಟನೆಯಲ್ಲಿ ಗೂಳೆಪ್ಪ ಮಂಜಪ್ಪ ಮತ್ತು ಕ್ವಾಡದರ ಬಸವಣ್ಣಪ್ಪ ಇವರ ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಸಂಪೂ ರ್ಣವಾಗಿ ಸುಟ್ಟು ಭಸ್ಮವಾಗಿದ್ದವು. ಆ ದಿನ ಸ್ಥಳಕ್ಕೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿದ್ದ ಜಿ.ಪಂ. ಮಾಜಿ ಸದಸ್ಯ ಹಾಗೂ ವಕೀಲರಾದ ಎಂ. ನಾಗೇಂದ್ರಪ್ಪ ಅವರು ಮಂಗಳವಾರ ಸಂತ್ರಸ್ಥ ಕುಟುಂಬಗಳ ರಾಸುಗಳಿಗೆ ಒಂದು ಲೋಡ್ ಮೇವನ್ನು ನೀಡಿ ಮಾನವೀಯತೆ ಮೆರೆದರು.
ಭಾನುವಳ್ಳಿ ಗ್ರಾಮದ ಬಂದೋಳ್ ಜಯಪ್ಪ, ಯು.ಕೆ. ಅಣ್ಣಪ್ಪ, ಗ್ರಾಮ ಪಂಚಾ ಯತ್ ಉಪಾಧ್ಯಕ್ಷ ಕೆ. ಚಂದ್ರಪ್ಪ, ಸದಸ್ಯ ಟಿ.ಪಿ. ಧನ್ಯಕುಮಾರ್, ಮಾಜಿ ಸದಸ್ಯ ಜೆ. ರಾಮಪ್ಪ, ಆಸಿಫ್ ಅಲಿ, ಡಿ. ಪಾಲಾಕ್ಷಿ, ಗ್ರಾಮಸ್ಥರಾದ ಆಡಿನವರ ಪರಮೇಶ್ವರಪ್ಪ, ಹೊಸಳ್ಳಿ ಹನುಮಂತಪ್ಪ, ಜೋಗಪ್ಪನವರ ನಾರಾಯಣಪ್ಪ, ಡಿ. ಬಸವರಾಜ್, ಎಚ್.ಎನ್. ಸಂತೋಷ್, ಧೂಳೆಹೊಳೆ ಗ್ರಾಮದ ಎಸ್‌ಡಿಎಂಸಿ ಅಧ್ಯಕ್ಷ ನಿಜಲಿಂಗಪ್ಪ, ಹೆಚ್. ಶಿವನಗೌಡ್ರು, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.