ಮಲೇಬೆನ್ನೂರು, ಜ. 30 – ಗೋವಿನಹಾಳ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಿ.ಟಿ. ಕಟ್ಟೆಯ ಚಿಕ್ಕಪ್ಪರ ತಿಪ್ಪೇಶಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುನಿತಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಸಂಘದ ನಿರ್ದೇಶಕರಾದ ಬಿ.ಹೆಚ್. ಗದಿಗೆಪ್ಪ, ಕುಮಾರ್. ಎಸ್, ಪಾಟೀಲ್, ಕೆ.ಹೆಚ್. ಬಸವರಾಜ್, ಶ್ರೀಮತಿ ಗಿರಿಜಮ್ಮ, ಶ್ರೀಮತಿ ಪುಷ್ಪಾ, ಕೆ.ಎಂ.ಬಸವರಾಜ್, ಕೆ.ಎಂ.ಹನುಮಗೌಡ, ಟಿ. ನಿಜಗುಣ, ಗ್ರಾಮದ ಮುಖಂಡರಾದ ಜಿ.ರುದ್ರಪ್ಪ, ಸಿ.ಹೆಚ್. ಸಿದ್ದಪ್ಪ, ಕೆ.ಬಸವನಗೌಡ, ಟಿ.ಬಿ. ಮಾದಪ್ಪ, ಸಂಘದ ಸಿಇಓ ಕೆ.ಬಿ. ಕರಿಬಸಪ್ಪ ಈ ವೇಳೆ ಹಾಜರಿದ್ದರು. ಚುನಾವಣೆ ನಂತರ ನೂತನ ಅಧ್ಯಕ್ಷರನ್ನು ಜಿ.ಪಂ.ಮಾಜಿ ಸದಸ್ಯ ಎಂ.ನಾಗೇಂದ್ರಪ್ಪ ಅಭಿನಂದಿಸಿದರು.
ಗೋವಿನಹಾಳ್ ಪಿಎಸಿಎಸ್ ಅಧ್ಯಕ್ಷರಾಗಿ ಜಿ.ಟಿ. ಕಟ್ಟೆಯ ಚಿಕ್ಕಪ್ಪರ ತಿಪ್ಪೇಶಪ್ಪ
