ದಾವಣಗೆರೆ, ಜ. 29- ಈಚೆಗೆ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಕರ್ನಾಟಕ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್‌ನ 4ನೇ ರಾಜ್ಯಮಟ್ಟದ ಮಾಸ್ಟರ್ಸ್ಟ್ ಗೇಮ್ಸ್ ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ನಗರದವರಾದ ಮಹ್ಮದ್ ರಫಿ, ಲಕ್ಷ್ಮಣರಾವ್ ಸಾಳಂಕಿ, ಪಿ. ನಾಗರಾಜಪ್ಪ ಭಾಗವಹಿಸಿ ವಿಜೇತರಾಗಿ ಬರುವ ಫೆಬ್ರವರಿ ತಿಂಗಳಲ್ಲಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯುವ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ ಶಿಪ್‌ಗೆ ಆಯ್ಕೆಯಾಗಿದ್ದಾರೆ.
45+ ವಯಸ್ಕರ ವಿಭಾಗದಲ್ಲಿ ಮಹ್ಮದ್ ರಫಿ 10 ಕಿ.ಮೀ. ಓಟದ ಸ್ಪರ್ಧೆಯಲ್ಲಿ ತೃತೀಯ (ಕಂಚು), 800 ಮೀ ಓಟದ ಸ್ಪರ್ಧೆಯಲ್ಲಿ ತೃತೀಯ (ಕಂಚು) ಮತ್ತು 4×100 ಮೀಟರ್ ರಿಲೇ ಓಟದಲ್ಲಿ ದ್ವಿತೀಯ (ಬೆಳ್ಳಿ) ಸ್ಥಾನ ಪಡೆದಿರುತ್ತಾರೆ.
70+ ವಯಸ್ಕರ ವಿಭಾಗದಲ್ಲಿ ಲಕ್ಷ್ಮಣರಾವ್ ಸಾಳಂಕಿ 10 ಕಿ.ಮೀ. ಓಟದ ಸ್ಪರ್ಧೆಯಲ್ಲಿ ದ್ವಿತೀಯ (ಬೆಳ್ಳಿ), 800 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ (ಗೋಲ್ಡ್), 5 ಕಿ.ಮೀ. ಓಟದ ಸ್ಪರ್ಧೆಯಲ್ಲಿ ತೃತೀಯ (ಕಂಚು) ಸ್ಥಾನ ಪಡೆದಿರುತ್ತಾರೆ. 75+ ವಯಸ್ಕರ ವಿಭಾಗದಲ್ಲಿ ಪಿ. ನಾಗರಾಜಪ್ಪ 5 ಕಿ.ಮೀ. ಓಟದ ಸ್ಪರ್ಧೆಯಲ್ಲಿ ದ್ವಿತೀಯ (ಬೆಳ್ಳಿ), 800 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ (ಗೋಲ್ಡ್), 1.5 ಕಿ.ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ (ಗೋಲ್ಡ್) ಸ್ಥಾನ ಪಡೆದಿರುತ್ತಾರೆ.