ದಾವಣಗೆರೆ, ಜ. 29 – ನಗರದ ಕೆ.ಎಸ್. ಆರ್.ಟಿ.ಸಿ ಬಸ್ ನಿಲ್ದಾಣದ ಹಿಂಭಾಗದ ಸರ್ಕಲ್ ನಲ್ಲಿ ದಿ. ವಿಷ್ಣುವರ್ಧನ್ ಪುತ್ಥಳಿಗೆ ಜೈ ಕರುನಾಡ ವೇದಿಕೆಯ ರಾಜ್ಯ ಗೌರವ ಅಧ್ಯಕ್ಷ ಆಲ್ಬರ್ಟ್, ಸಂಸ್ಥಾಪಕ ಅಧ್ಯಕ್ಷ ಟಿ. ಮಂಜುನಾಥ್, ಆನಂದ್, ಗಿರೀಶ, ಹನುಮಂತ, ಸಂದೀಪ್, ಗುರುಮೂರ್ತಿ, ಮಮತಾ, ಆರ್. ಸ್ನೇಹ ಹಾಗೂ ವಿಷ್ಣುವರ್ಧನ್ ಅಭಿಮಾನಿಗಳ ಬಳಗದಿಂದ ಸೇರಿ ವಿಷ್ಣುವರ್ಧನ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ತದನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
January 20, 2025