ದಾವಣಗೆರೆ, ಜ.29- ರಥಸಪ್ತಮಿ ಪ್ರಯುಕ್ತ ನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಸಂಕಲ್ಪ ಸೇವಾ ಫೌಂಡೇಶನ್ ಮತ್ತು ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಹಾಗೂ ಸಂಕಲ್ಪ ಯೋಗ ಶಾಲೆ ಸಹಭಾಗಿತ್ವದಲ್ಲಿ ಸೂರ್ಯ ನಮಸ್ಕಾರ ಮಾಡಲಾಯಿತು. ಧ್ಯಾನ ಭಜನೆಯನ್ನು ನೆರವೇರಿಸಲಾಯಿತು.
ಹಿರಿಯ ಯೋಗ ಪಟು ಕೆ.ಕರಿಬಸಪ್ಪ ಅಧ್ಯಕ್ಷಥೆ ವಹಿಸಿದ್ದರು. ಸಂಕಲ್ಪ ಸೇವಾ ಫೌಂಡೇಶನ್ ಅಧ್ಯಕ್ಷ ಜಿ.ಮಹಾಂತೇಶ್ ನೇತೃತ್ವ ವಹಿಸಿದ್ದರು. ದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟಿ ಗೌಡ್ರು ಚನ್ನಬಸಪ್ಪ, ಮಹಾನಗರ ಪಾಲಿಕೆಯ ಸದಸ್ಯ ಎಲ್.ಡಿ ಗೋಣೆಪ್ಪ, ಅಮೃತಾಮಯಿ ಶಾಲೆ ಪ್ರಾಂಶುಪಾಲ ಕೊಟ್ರೇಶ್, ಯೋಗ ಶಿಕ್ಷಕರಾದ ಪ್ರಕಾಶ್ ಕುರುಡೇಕರ್, ಕೊಂಡಜ್ಜಿ ಉಮೇಶ್ ಎಸ್.ಮಹದೇವಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.