ಹರಪನಹಳ್ಳಿ,ಜ.31- ಕಂಚಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಿ.ವಿದ್ಯಾಶ್ರೀ ಬಸವರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷೆಯಾಗಿದ್ದ ರೇಣುಕಾ ನಾಗರಾಜ್ ಅವರು ಸಲ್ಲಿಸಿದ್ದ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. 24 ಸದಸ್ಯರ ಬಲ ಹೊಂದಿರುವ ಗ್ರಾಮ ಪಂಚಾಯತಿಯಲ್ಲಿ ಜಿ.ವಿದ್ಯಾಶ್ರೀ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ತಹಶೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ.ಕೆ.ಬಿ ಕೊಟ್ರೇಶ್, ರೆಡ್ಡಿ ಶಾಂತಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್. ರಾಜಪ್ಪ, ಕಾಂಗ್ರೆಸ್ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಜಯಲಕ್ಷ್ಮಿ, ಸದ್ಯೋಜಾತಪ್ಪ, ಎಂ.ಬಿ ಅಂಜಿನಪ್ಪ, ಡಿ.ಕೆ ಶಿವಕುಮಾರ್, ಈ ವೆಂಕಟೇಶ್, ಸುನಿಲ್ ಕುಮಾರ್ ಬಿದ್ರಿ, ಜಿ. ನಾಗರಾಜ, ಕೆ.ಪಿ ಬಸವರಾಜಪ್ಪ, ಕೆಂಚನಗೌಡ, ಪಿ.ಕೊಟ್ರೇಶಪ್ಪ, ಎನ್.ಎಂ ಕೊಟ್ರಯ್ಯ, ಎಂ.ಮಂಜುನಾಥ್, ಕೆ.ಭೀಮಪ್ಪ, ಪರಸಪ್ಪ, ಕೆಂಚಪ್ಪ, ರೇವ್ಯಾನಾಯ್ಕ, ಪರಸಪ್ಪ, ಗುಂಡಗತ್ತಿ ನೇತ್ರಾವತಿ. ಕೆ.ಎಸ್. ನಿಜಗುಣ ಮತ್ತಿತರರಿದ್ದರು.