ಸೂರ್ಯಾರಾಧನೆಯಿಂದ ದೀರ್ಘಾಯುಷ್ಯ ಲಭಿಸುವುದು

ಸೂರ್ಯಾರಾಧನೆಯಿಂದ ದೀರ್ಘಾಯುಷ್ಯ ಲಭಿಸುವುದು

108 ಸುತ್ತಿನ ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ ಕಾರ್ಯಕ್ರಮದಲ್ಲಿ ಯೋಗ ಗುರು ರಾಘವೇಂದ್ರ ಗುರೂಜಿ ಪ್ರತಿಪಾದನೆ

ದಾವಣಗೆರೆ, ಜ. 28 – ಪ್ರತಿನಿತ್ಯ ಸೂರ್ಯನ ಆರಾಧನೆ ಮಾಡುವುದರಿಂದ ಬಲಸಂವರ್ಧನೆ, ಆರೋಗ್ಯ, ದೀರ್ಘಾ ಅಯುಷ್ಯ ಲಭಿಸುವುದು ಎಂದು ಆದರ್ಶಯೋಗ ಪ್ರತಿಷ್ಠಾನದ  ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯೋಗ ತಜ್ಞ ರಾಘವೇಂದ್ರ ಗುರೂಜಿ ಪ್ರತಿಪಾದಿಸಿದರು.

ನಗರದ  ಆದರ್ಶ ಯೋಗ ಪ್ರತಿಷ್ಠಾನ ಶ್ರೀ ಮಹಾಮಾಯಿ ವಿಶ್ವ ಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ರಥಸಪ್ತಮಿ ಪ್ರಯುಕ್ತ ಆಯೋಜಿಸಲಾಗಿದ್ದ 108 ಸುತ್ತಿನ ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸೂರ್ಯನು ಆರೋಗ್ಯದಾತನೆಂಬುದಾಗಿ ಋಗ್ವೇದವು ಅವನನ್ನು ಪ್ರಾರ್ಥಿಸಿದೆ. ವೇದ ಪುರಾಣಗಳು ಸಹ ಸೂರ್ಯನನ್ನು ರೋಗ ನಿವಾರಕನೆಂದು ಸಾರಿದೆ. ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ಮಹಾವ್ಯಾಧಿಗಳು ನಿವಾರಣೆಯಾಗುತ್ತವೆ ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಸ್ಪಷ್ಟಪಡಿಸಿದ್ದಾನೆ. ರಥ ಸಪ್ತಮಿಯು ಮಾಘ ಮಾಸ ಶುಕ್ಲ ಪಕ್ಷದ ಸಪ್ತಮಿಯಂದು ಆಚರಿಸುವ ಪದ್ಧತಿಯಾಗಿದ್ದು ಇಂದಿನಿಂದ ಸೂರ್ಯನು ತನ್ನ ಪಥವನ್ನು ಬದಲಿಸುವ ವಿಶೇಷ ದಿನವೂ ಹೌದು. 108 ಶತನಾಮಾವಳಿಗಳೊಂದಿಗೆ ಬೀಜ ಮಂತ್ರಗಳನ್ನು ಪಠಿಸುತ್ತಾ, ಸೂರ್ಯ ನಮಸ್ಕಾರವನ್ನು ವಿಧಿವತ್ತಾಗಿ ಯಾರು ಮಾಡುವರೋ ಅವರಿಗೆ ಓಜಸ್ಸು, ತೇಜಸ್ಸು, ಶಾಂತಿ, ನೆಮ್ಮದಿ ತೃಪ್ತಿಯ ಫಲವು ಸಿಗುವುದು ಎಂದು ರಥಸಪ್ತಮಿಯ ಸಂಕ್ಷಿಪ್ತ ವಿಶೇಷತೆಯನ್ನು ತಿಳಿಸಿದರು.

ಪೂಜಾ ಕಾರ್ಯಕ್ರಮವನ್ನು ಅಂತರವಳ್ಳಿ ಶ್ರೀ ಮುರುಳೀಧರ ಆಚಾರ್ ಅವರು ವಿಧಿವತ್ತಾಗಿ ನಡೆಸಿಕೊಟ್ಟರು. 

ಕಾರ್ಯಕ್ರಮದಲ್ಲಿ ಪಿ.ಜೆ. ಬಡಾವಣೆ ಓಂಕಾರ ಯೋಗ ಕೇಂದ್ರದ ಯೋಗ ಗುರುಗಳಾದ ಶ್ರೀ ವೀರಭದ್ರಯ್ಯ ಮತ್ತು ರಾಜಣ್ಣ, ಮುರುಗೇಶ್, ಕೆ.ಕೆ. ಚಿದಾನಂದ ಇನ್ನಿತರರು ಭಾಗವಹಿಸಿದ್ದರು. 

ಪ್ರತಿಷ್ಠಾನದ ಯೋಗ ಸಾಧಕರಾದ ಅಂಚೆ ಇಲಾಖೆಯ ಶ್ರೀಮತಿ ವೇದಾವತಿ ಪ್ರಸಾದ ಸೇವೆ, ನಿವೃತ್ತ ತಹಶೀಲ್ದಾರ್ ವಿಶ್ವನಾಥ್ ಹಾಗೂ ಅಧ್ಯಾತ್ಮ ಚಿಂತಕ ಮಂಜುನಾಥ್ ಹೆಚ್. ಹೂವಿನ ಅಲಂಕಾರ ಸೇವೆ ಅರ್ಪಿಸಿದರು. 

ಸಮಾಜ ಕಲ್ಯಾಣ ಇಲಾಖೆಯ ಸಂತೋಷ್, ಇಂಜಿನಿಯರ್ ಚೇತನ್, ಶ್ರೀಮತಿ ಶ್ವೇತಾ ಒಡೆಯರ್, ಶ್ರೀಮತಿ ಭಾಗ್ಯ, ಯೋಗ ಸಾಧಕಿ ಅಶ್ವಿನಿ ವಡೋನಿ, ಭರತ್ ವಡೋನಿ ಇನ್ನಿತರರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಾಸ್ಟರ್ ಪ್ರಶಾಂತ್ ಎಂ.ಎಂ., ಮುಖೇಶ್ ದೇವ್, ಗೌರಮ್ಮ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.  

error: Content is protected !!