ಮಲೇಬೆನ್ನೂರು, ಜ.29- ಪಟ್ಟಣದಲ್ಲಿ ಬಿಜೆಪಿ ಸರ್ಕಾರದ ಕಾರ್ಯಸಾಧನೆಯ ಕರಪತ್ರ ಮತ್ತು ಸ್ಟಿಕ್ಕರ್ ಹಾಗೂ ಗೋಡೆ ಬರಹ ಅಂಟಿಸುವುದರ ಜೊತೆಗೆ ಪಕ್ಷದ ಕಾರ್ಯಕರ್ತರ ಮನೆ ಮೇಲೆ ಬಿಜೆಪಿ ಬಾವುಟ ಹಾರಿಸುವ ವಿಜಯ ಸಂಕಲ್ಪ ಅಭಿಯಾನಕ್ಕೆ ಹರಿಹರ ತಾ. ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್ ಭಾನುವಾರ ಚಾಲನೆ ನೀಡಿದರು.
ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಬಿ.ಮಂಜುನಾಥ್, ಪಿ.ಆರ್.ರಾಜು, ಎ.ಕೆ.ಲೋಕೇಶ್, ಮಾಜಿ ಸದಸ್ಯ ಸುಬ್ಬಿ ರಾಜಣ್ಣ, ತಾ.ಗ್ರಾ.ಬಿಜೆಪಿ ಪ್ರಧಾನ ಕಾರ್ಯದರ್ಶಿ ಆದಾಪುರ ವೀರೇಶ್, ಬಿಜೆಪಿ ಮುಖಂಡರಾದ ಭೋವಿ ಮಂಜಣ್ಣ, ನ್ಯಾಯಬೆಲೆ ಅಂಗಡಿ ಮಂಜಣ್ಣ, ಪಾಳೇಗಾರ್ ನಾಗರಾಜ್, ಆನಂದಚಾರ್, ತಳಸದ ಸಂತೋಷ್, ಬೆಣ್ಣೆಹಳ್ಳಿ ಬಸವರಾಜ್, ಪೂಜಾರ್ ಗಂಗಾಧರ್, ಜಿ.ಪಿ.ಹನುಮಗೌಡ ಮತ್ತಿತರರು ಈ ವೇಳೆ ಹಾಜರಿದ್ದರು.