ಸುಂಕದಕಟ್ಟೆ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದ ನೂತನ ರಾಜಗೋಪುರ, ಕಳಸಾರೋಹಣ

ಸುಂಕದಕಟ್ಟೆ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದ ನೂತನ ರಾಜಗೋಪುರ, ಕಳಸಾರೋಹಣ

ಹೊನ್ನಾಳಿ, ಫೆ.1- ತಾಲ್ಲೂಕಿನ ಪವಿತ್ರ ಕ್ಷೇತ್ರ ಸುಂಕದಕಟ್ಟೆಯ ಶ್ರೀ ಮಂಜುನಾಥ ಸ್ವಾಮಿ, ಶ್ರೀ ನರಸಿಂಹಸ್ವಾಮಿ  ದೇವಸ್ಥಾನದ ನೂತನ ರಾಜಗೋಪುರದ ಕಳಸಾರೋಹಣ ಕಾರ್ಯಕ್ರಮವು ನಾಳೆ ದಿನಾಂಕ 2 ಮತ್ತು 3 ರಂದು  ಜರುಗಲಿದೆ  ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಕೆ. ನರಸಿಂಹಮೂರ್ತಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ದಿನಾಂಕ 2ರ ಗುರುವಾರ ಬೆಳಗ್ಗೆ ಗಂಗಾಪೂಜೆ, ಮಂಗಳ ವಾದ್ಯಗಳೊಂದಿಗೆ ನೂತನ ಕಳಸಗಳ ಮೆರವಣಿಗೆ, ಜರುಗುವವು. ನಂತರ 11.30ರಿಂದ 12ಗಂಟೆಗೆ  ರಾಜಗೋಪುರ ಕಳಸಾರೋಹಣ ಪ್ರತಿಷ್ಟಾಪನೆ ನಡೆಯಲಿದೆ ಎಂದರು.

ಈ ಧಾರ್ಮಿಕ  ಕಾರ್ಯಕ್ರಮದಲ್ಲಿ ಹೊಸದುರ್ಗ ಕುಂಚಿಟಿಗೆ ಸಮಾಜದ  ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ,  ಕನಕ ಗುರುಪೀಠದ ಶ್ರಿ ಈಶ್ವರಾನಂದಪುರಿ ಸ್ವಾಮೀಜಿ,   ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭಗೀರಥ ಗುರುಪೀಠದ  ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ,   ವಾಲ್ಮೀಕಿ ಗುರುಪೀಠದ  ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ,  ರಾಯದುರ್ಗದ  ಶ್ರೀ ಎ.ಪಿ.ರಾಮಮೂರ್ತಿ ಸ್ವಾಮೀಜಿ,   ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ,   ಹೊಟ್ಯಾಪುರದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ,   ರಾಂಪುರದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರಿನ ಮಹರ್ಷಿ ಗಂದೋಡಿ ಶ್ರೀ ಜಯ ಶ್ರಿನಿವಾಸ ಗುರೂಜಿ, ವಡ್ಡನಾಳ್‍ನ ಅಷ್ಟೋತರ ಶತಶ್ರೀ ಶಂಕರಾತ್ಮಾನಂದ ಸ್ವಾಮೀಜಿ ಭಾಗವಹಿಸಲಿದ್ದಾರೆ  

ಶಾಸಕ ಎಂ.ಪಿ.ರೇಣುಕಾಚಾರ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು  ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಕೆ.ನರಸಿಂಹಮೂರ್ತಿ ವಹಿಸಲಿದ್ದಾರೆ.    

ಸಂಜೆ 6 ಗಂಟೆಗೆ ಸುರೇಖಾ ಹೆಗಡೆ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ.

ಮುಜರಾಯಿ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ ಅವರು ಫೆಬ್ರವರಿ 3 ರಂದು ರಾಜಗೋಪುರ ಮತ್ತು ಪಂಚ ಕಳಸಾರೋಹಣಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿ ಲೋಕಾರ್ಪಣೆ ಮಾಡುವರು.    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ರಾಜಗೋಪುರ ಲೋಕಾರ್ಪಣೆಗೊಳಿಸಲಿದ್ದಾರೆ. 

ಶಾಸಕ ಎಂ.ಪಿ.ರೇಣುಕಾಚಾರ್ಯ  ಅಧ್ಯಕ್ಷತೆ ವಹಿಸುವರು.    ವಿಶ್ರಾಂತ ಪ್ರಾಂಶುಪಾಲ  ಎಸ್.ಆರ್. ಹನುಮಂತಪ್ಪ ಅವರ ಕೃತಿ  `ಮನಸ್ಸು -ಮಹಿಮೆ’ ಎಂಬ ಪುಸ್ತಕ ಬಿಡುಗಡೆಯಾಗಲಿದೆ.  ಸಂಜೆ  ರಸಮಂಜರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ ಸುಂದರ ರಾಜಗೋಪುರ ನಿರ್ಮಾಣವಾಗಿದ್ದು, ತಳಪಾಯದಿಂದ ತುದಿಯವರೆಗೆ ಕಾಂಕ್ರಿಟ್ ಪಿಲ್ಲರ್‌ಗಳ ಮೇಲೆ
ನಿರ್ಮಿಸಲಾಗಿದ್ದು, ಉಸ್ತುವಾರಿಯನ್ನು ದಾವಣಗೆರೆ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ್, ಹೊನ್ನಾಳಿ ಲೋಕೋಪಯೋಗಿ ಇಲಾಖೆ ಕಣುಮಪ್ಪ, ಎಚ್.ಎ. ಶಶಿಧರ್ ಇವರ ಉಸ್ತುವಾರಿಯಲ್ಲಿ, ಪಿ.ಜಿ. ಕೃಷ್ಣಮೂರ್ತಿ, ಸತ್ಯ ಇಂಜಿನಿಯರ್ ಕಂಟ್ರ್ಯಾಕ್ಟರ್ ಬೆಂಗಳೂರು ಇವರ ಮೇಲುಸ್ತುವಾರಿಯಲ್ಲಿ ನಿರ್ಮಾಣವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ರಾಜುಸ್ವಾಮಿ, ಸದಸ್ಯರಾದ ಎಸ್.ಎಚ್.ನರಸಪ್ಪ, ಎಸ್.ಎಚ್. ಚಂದ್ರಮ್ಮ ತಿಮ್ಮಪ್ಪ, ಡಿ.ಟಿ.ಗೌರಮ್ಮ ರಾಮಚಂದ್ರಪ್ಪ, ಎಸ್.ಕೆ. ಕರಿಯಪ್ಪ, ಎ.ಕೆ.ಅಣ್ಣಪ್ಪ, ಎಸ್.ಎನ್.ಪ್ರಸನ್ನಕುಮಾರ್, ಆರ್.ಆರ್.ರಾಕೇಶ್ ಸೇರಿದಂತೆ, ಗ್ರಾಮದ ಮುಖಂಡರು ಇದ್ದರು.  

error: Content is protected !!