ದಾವಣಗೆರೆ, ಜ.27- ಕೆಟ್ಟ ಚಟಗಳು ಮನುಷ್ಯನ ಉತ್ತಮ ವ್ಯಕ್ತಿತ್ವವನ್ನು ಹಾಳು ಮಾಡ ಬಲ್ಲವು. ಅಂತಹ ವ್ಯಕ್ತಿತ್ವ ಹಾಳು ಮಾಡಿಕೊಳ್ಳುವ ಬದಲು ಗೌರವ, ಘನತೆ ಹೆಚ್ಚಿಸಿ ಕೊಳ್ಳುವ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಅವಶ್ಯವಿದೆ ಎಂದು ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕರೂ ಆದ ಜಾನಪದ ವಿದ್ವಾಂಸ ಡಾ.ಎಂ.ಜಿ. ಈಶ್ವರಪ್ಪ ಕರೆ ನೀಡಿದರು.
ಅನ್ವೇಷಕರು ಆರ್ಟ್ ಫೌಂಡೇಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಾವಣಗೆರೆ ವಿಶ್ವವಿದ್ಯಾ ನಿಲಯದ ಸಂಯುಕ್ತಾಶ್ರಯದಲ್ಲಿ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಯುವ ಕಲಾ ಸಂಭ್ರಮ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡುವ ಮೂಲಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಭ್ರಮವನ್ನು ಆಚರಿಸುವಂತಾಗ ಬೇಕು. ಆಯಾ ಶಾಲಾ-ಕಾಲೇಜುಗಳಲ್ಲಿ ವಾರ್ಷಿಕೋತ್ಸವ ಆಚರಿಸುವುದರೊಂದಿಗೆ ಅಲ್ಲಿನ ಗುಣ ಸ್ವಭಾವ ವನ್ನು ಅಳತೆ ಮಾಡಬಹುದಾಗಿದೆ ಎಂದರು.
ಅದರಂತೆ ಹಳ್ಳಿಗಳಲ್ಲಿರುವ ರಸ್ತೆ, ಕಟ್ಟಡ ಗಳಿಗಿಂತ ಅಲ್ಲಿನ ಸಂಸ್ಕೃತಿ, ನಡೆ ನುಡಿ ಆಧಾರದ ಮೇಲೆ ಅಲ್ಲಿನ ಜನರ ಗುಣ ಸ್ವಭಾವವನ್ನು ಹೇಳಬಹುದಾಗಿದೆ ಎಂದು ಹೇಳಿದರು.
ನಾಟಕಗಳ ಆಯ್ಕೆ ಅಷ್ಟು ಸುಲಭದ ಕೆಲಸವಲ್ಲ. ಇದಕ್ಕೆ ನಾಟಕದ ಕಥಾವಸ್ತುವಿನ ಅಧ್ಯ ಯನ, ತಜ್ಞರ ಮಾರ್ಗದರ್ಶನ ಮುಖ್ಯ. ನಾಟಕದ ಆಯ್ಕೆ, ನಾಟಕದ ನಿರ್ದೇಶನ, ಮಿಮಿಕ್ರಿ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಮೈಮ್, ನಿರ್ವಹಣೆ ಇವುಗಳಲ್ಲಿ ಪರಿಣತಿ ಪಡೆದವರಿಂದ ತರಬೇತಿಯನ್ನು ನೀಡಿದರೆ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ದಾವಣಗೆರೆ ವಿವಿ ಎಂಬಿಎ ವಿಭಾಗದ ಪ್ರಾಧ್ಯಾಪಕರೂ, `ಜಿಮ್‌ಖಾನ್’ ಅಧ್ಯಕ್ಷ ಡಾ. ಆರ್. ಶಶಿಧರ್ ಮಾತ ನಾಡಿ, ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಲೆಗಳ ಬಗ್ಗೆ ತರಬೇತಿ ನೀಡುವ ಅಗತ್ಯವಿದೆ. ಯಾವುದೇ ಸ್ಪರ್ಧೆಗಳಿರಲಿ ಭಾಗವಹಿಸುವಿಕೆ ಮುಖ್ಯ. ಸೋಲು-ಗೆಲುವು ಮುಖ್ಯವಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅನೇಷಕರು ಆರ್ಟ್ ಫೌಂಡೇಶನ್ ಪದಾಧಿಕಾರಿಗಳಾದ ಎಸ್.ಎಸ್. ಸಿದ್ದರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸತೀಶ್ ಕುಮಾರ್ ಪಿ. ವಲ್ಲೇಪುರೆ ಸ್ವಾಗತಿಸಿ ದರು. ರವೀಂದ್ರ ಅರಳಗುಪ್ಪಿ ನಿರೂಪಿಸಿ, ವಂದಿಸಿ ದರು. ಕಾಲೇಜಿನ ಪ್ರಾಧ್ಯಾಪಕ ದತ್ತಾತ್ರೇಯ ಭಟ್ `ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞಾ ವಿಧಿ’ ಬೋಧಿಸಿದರು.