ದಾವಣಗೆರೆ, ಜ.27- ವಿಶಿಷ್ಟ ವಿನ್ಯಾಸ ನೂತನ ಆಕರ್ಷಣೆ ಹಾಗೂ ವಿಶೇಷ ಸೌಲಭ್ಯ ಒಳಗೊಂಡಿರುವ ಕಾಂಪ್ಯಾಕ್ಟ್ ಸೆಡಾನ್ ಹುಂಡೈ ಆಲ್ ನ್ಯೂ ಗ್ರಾಂಡ್ ಐ10 ಕಾರ್ ಅನ್ನು ನಗರದ ಕೆ.ಜೆ. ಹುಂಡೈ ಶೋರೂಂ ಆವರಣದಲ್ಲಿ ಗುರುವಾರ ಮಾರುಕಟ್ಟೆಗೆ ಪರಿಚಯಿಸಲಾಯಿತು.
ಯುವ ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಿರುವ ಈ ಕಾರು, ಸೆಡಾನ್ ಶ್ರೇಣೆಯಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 2023ರ ದಶಕದ ವಾಹನ ಉದ್ದಿಮೆ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಲಿರುವ ಮೊದಲ ಕಾರು ಇದಾಗಿದೆ ಎಂದು ಶೋರೂಂ ಮಾಲೀಕ ಕೆ.ಜೆ.ಅಫಕ್ ರಜ್ವಿ ತಿಳಿಸಿದರು. ಸಮರ್ಪಕ ಇಂಧನ ಬಳಕೆ, ಉತ್ತಮ ಕಾರ್ಯನಿರ್ವಹಣೆಯ ಉತ್ಕೃಷ್ಟವಾದ ಬಿಎಸ್6 ಎಂಜಿನ್ ಒಳಗೊಂಡಿರುವ ಈ ವಾಹನವು ಪೆಟ್ರೋಲ್ ಮತ್ತು ಡಿಸೇಲ್‍ನ 2 ಶ್ರೇಣಿಯಲ್ಲಿ ಲಭ್ಯವಿರುತ್ತದೆ.
ಮುಖ್ಯ ಅತಿಥಿಯಾಗಿ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ|| ಬಿ.ಡಿ. ಕುಂಬಾರ್, ಕೆ.ಜೆ.ಹುಂಡೈ ಸಂಸ್ಥೆಯ ಅಧ್ಯಕ್ಷ ಕೆ.ಜಾವೀದ್ ಸಾಬ್, ಸಂಸ್ಥೆಯ ನಿರ್ದೇಶಕರಾದ ಕೆ.ಜೆ.ಅಬ್ರಾರ್ ಹಾಗೂ ಇತರರು ಉಪಸ್ಥಿತರಿದ್ದರು.